ಗಾಝಾದಲ್ಲಿ ಪೊಲಿಯೋ ಲಸಿಕೆ ಅಭಿಯಾನವನ್ನು ಪೂರ್ಣಗೊಳಿಸಿದ ಯೂನಿಸೆಫ್, ವಿಶ್ವ ಅರೋಗ್ಯ ಸಂಸ್ಥೆ
ವರದಿ: ಫೀಬಿ ಮಾರ್ಟೆಲ್, ಅಜಯ್ ಕುಮಾರ್
ಮುಂದುವರೆಯುತ್ತಿರುವ ಯುದ್ಧಗಳ ಹಿನ್ನೆಲೆ ಈವರೆಗೂ ನಿಲ್ಲಿಸಲಾಗಿದ್ದ ಪೋಲಿಯೋ ಲಸಿಕೆ ಅಭಿಯಾನವನ್ನು ಯುನಿಸೆಫ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಗಾಜಾದಲ್ಲಿ ಇಂದು ಸಂಪೂರ್ಣಗೊಳಿಸಿದೆ. 2ನೇ ಹಂತದಲ್ಲಿ ನಡೆದ ಪೋಲಿಯೋ ಲಸಿಕೆ ಅಭಿಯಾನವು ಸುಮಾರು 5,50,000 ಡೋಸುಗಳನ್ನು ನೀಡಿದೆ ಎಂದು ವರದಿಯಾಗಿದೆ.
ಪ್ರತಿದಿನ ನಡೆಯುತ್ತಿರುವ ಒಂದಲ್ಲ ಒಂದು ರೀತಿಯ ದಾಳಿಗಳ ನಡುವೆಯೂ ಸಹ ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆಯಾದ ಯೂನಿಸೆಫ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯು ಜಂಟಿಯಾಗಿ ಪ್ರದೇಶದಲ್ಲಿ ಪೋಲಿಯೋ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದೆ. ನವೆಂಬರ್ ಐದರಂದು ಗಾಜಾ ಪ್ರದೇಶದಲ್ಲಿ ಸುಮಾರು 5,50,000 ಮಕ್ಕಳು ಎರಡನೇ ಹಂತದ ಪೋಲಿಯೋ ಲಸಿಕೆಯನ್ನು ಪಡೆದುಕೊಂಡರು. ಇದು ಒಟ್ಟಾರೆಯಾಗಿ ಯಶಸ್ವಿ 94% ಆಗಿದೆ.
2024ರಲ್ಲಿ ಆರಂಭವಾದ ಪೋಲಿಯೋ ಲಸಿಕೆ ಅಭಿಯಾನವು ಈವರೆಗೂ ಸುಮಾರು 91% ರಷ್ಟು ಆಗಿದೆ. ಗಾಜಾದ ಹಲವು ಪ್ರದೇಶಗಳಲ್ಲಿ ದಿನನಿತ್ಯ ದಾಳಿ ನಡೆಯುತ್ತಿರುವ ಕಾರಣ ಪೋಲಿಯೋ ಲಸಿಕೆ ಅಭಿಯಾನವನ್ನು ಕೈಗೊಳ್ಳಲು ಆಗಲಿಲ್ಲ ಎಂದು ಯೂನಿಸೆಫ್ ಮಕ್ಕಳ ಸಂಸ್ಥೆಯು ಹೇಳಿದೆ.