ಹುಡುಕಿ

PALESTINIAN-ISRAEL-CONFLICT PALESTINIAN-ISRAEL-CONFLICT  (AFP or licensors)

ವಿಶ್ವಸಂಸ್ಥೆಯ ನೆರವು ಕಾರ್ಯಕರ್ತರ ಹೇಳಿಕೆ - ಗಾಜಾಕ್ಕೆ ಸಹಾಯ ಕಾರ್ಯಾಚರಣೆಗಳನ್ನು ಇಸ್ರಯೇಲ್ ನಿರಾಕರಿಸಿದೆ

ವಿಶ್ವಸಂಸ್ಥೆಯ ಮಾನವತಾವಾದಿಗಳ ಪ್ರಕಾರ, ಡಿಸೆಂಬರ್ ಆರಂಭದಲ್ಲಿ ಇಸ್ರಯೇಲ್ ನಿರ್ಬಂಧಿಸಿದ 38 ಕಾರ್ಯಾಚರಣೆಗಳಿಗೆ ಹೊಸ ನಿರಾಕರಣೆ ಸೇರಿಸುತ್ತದೆ.

ನಾಥನ್ ಮೊರ್ಲೆ

ಇಸ್ರಯೇಲ್‌ ನ ಅಧಿಕಾರಿಗಳು ಉತ್ತರ ಗಾಜಾದಲ್ಲಿ ಮುತ್ತಿಗೆ ಹಾಕಿದ ಪ್ರದೇಶಗಳಿಗೆ ವಿಶ್ವಸಂಸ್ಥೆಯ ನೇತೃತ್ವದ ಮೂರು ಸಹಾಯ ಕಾರ್ಯಾಚರಣೆಗಳನ್ನು ನಿರಾಕರಿಸಿದ್ದಾರೆ.

ಮಾನವತಾವಾದಿಗಳ ಪ್ರಕಾರ, ಡಿಸೆಂಬರ್ ಆರಂಭದಲ್ಲಿ ಅವರು ನಿರ್ಬಂಧಿಸಿದ 38 ಕಾರ್ಯಾಚರಣೆಗಳಿಗೆ ಇದನ್ನೂ ಸೇರಿಸುತ್ತದೆ.

ಈ ತಿಂಗಳ 1 ಮತ್ತು 16ರ ನಡುವೆ ಗಾಜಾಕ್ಕೆ ಅಗತ್ಯ ಸರಬರಾಜುಗಳನ್ನು ತರಲು ಯೋಜಿಸಲಾದ ಎರಡು ಹೆಚ್ಚುವರಿ ಕಾರ್ಯಾಚರಣೆಗಳಿಗೆ ಇಸ್ರಯೇಲರು ಅಡ್ಡಿಪಡಿಸಿದ್ದಾರೆ ಎಂದು ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆ ಕಚೇರಿ (OCHA) ಹೇಳಿದೆ.

ಉತ್ತರ ಗಾಜಾ ಗವರ್ನರ್‌ ರ ಪ್ರಾಂತ್ಯಕ್ಕೆ ವಿಶ್ವಸಂಸ್ಥೆಯ-ನೇತೃತ್ವದ ನೆರವು ಕಾರ್ಯಾಚರಣೆಗಳನ್ನು 'ಅಗಾಧವಾಗಿ ನಿರಾಕರಿಸಲಾಗಿದೆ, ವಿಶೇಷವಾಗಿ ಬೀಟ್ ಲಾಹಿಯಾ, ಬೀಟ್ ಹನೌನ್ ಮತ್ತು ಜಬಲ್ಯಾದ ಭಾಗಗಳಲ್ಲಿ ಮುತ್ತಿಗೆ ಹಾಕಲಾದ ಪ್ರದೇಶಗಳನ್ನು ತಲುಪಲು ಪ್ರಯತ್ನಿಸುತ್ತಿರುವರು' ಎಂದು OCHA ಹೇಳಿದೆ.

ಇತರ ಬೆಳವಣಿಗೆಗಳಲ್ಲಿ, ಹಮಾಸ್‌ನ ಸಶಸ್ತ್ರ ವಿಭಾಗವಾದ ಅಲ್-ಕಸ್ಸಾಮ್ ಸೇನಾದಳಗಳು, ಅದರ ಕಾರ್ಯಕರ್ತರು ಇಸ್ರಯೇಲ್‌ ಸೈನಿಕರನ್ನು ಗುರಿಯಾಗಿಸಿಕೊಂಡು ಸ್ಫೋಟಕಗಳೊಂದಿಗೆ ಬೂಬಿ-ಟ್ರ್ಯಾಪ್ ಮಾಡಿದ ನಿವಾಸವನ್ನು ಸ್ಥಾಪಿಸಿದರು ಎಂದು ಹೇಳಿದರು. ಈ ಸ್ಫೋಟವು 11 ಇಸ್ರಯೇಲ್ ಸೈನಿಕರನ್ನು ಗುರಿಯಾಗಿಸಿಕೊಂಡು‌, ಸಾವು ಮತ್ತು ಗಾಯಗಳಿಗೆ ಕಾರಣವಾಯಿತು ಎಂದು ಸೇನಾದಳಗಳು ಹೇಳಿಕೊಂಡಿವೆ.

ಇದಕ್ಕೂ ಮೊದಲು, ಸೌದಿ ಅರೇಬಿಯಾದೊಂದಿಗಿನ ಸಂಬಂಧವನ್ನು ಸಾಮಾನ್ಯಗೊಳಿಸುವ ಪ್ರಯತ್ನಗಳ ಭಾಗವಾಗಿ ಇಸ್ರಯೇಲ್ ಪ್ಯಾಲೇಸ್ತೀನಿಯಾದ ರಾಜ್ಯತ್ವದ ಹಾದಿಗೆ ಇಸ್ರಯೇಲ್ ಒಪ್ಪಿಕೊಂಡಿದೆ ಎಂಬ ವರದಿಗಳನ್ನು ತಿರಸ್ಕರಿಸಿ, ಪ್ಯಾಲೇಸ್ತೀನಿಯಾ ರಾಜ್ಯವನ್ನು ಸ್ಥಾಪಿಸಲು ತಾನು ಅನುಮತಿಸುವುದಿಲ್ಲ ಎಂದು ಇಸ್ರಯೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹುರವರು ಭರವಸೆ ನೀಡಿದರು.

‘ಪ್ರಧಾನಿ ನೆತನ್ಯಾಹುರವರು ಪ್ಯಾಲೇಸ್ತೀನಿ ರಾಷ್ಟ್ರದ ಸ್ಥಾಪನೆಯ ವಿರುದ್ಧ ವರ್ತಿಸಿದ್ದಾರೆ ಮತ್ತು ಅದರ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಅವರ ಕಚೇರಿಯು ವರದಿಗಳನ್ನು ‘ಸಂಪೂರ್ಣ ಸುಳ್ಳು’ ಎಂದು ವಿವರಿಸಿದೆ.

18 December 2024, 12:51