ಸಿರಿಯಾದಲ್ಲಿ ಸಂಧಾನವನ್ನು ಸ್ಥಾಪಿಸಲು ಮತ್ತು ನಿರ್ಬಂಧಗಳನ್ನು ರದ್ದುಗೊಳಿಸುವ ಭರವಸೆಯನ್ನು ವ್ಯಕ್ತಪಡಿಸಿದ ಕಾರ್ಡಿನಲ್ ಝೆನಾರಿರವರು
ನಾಥನ್ ಮೊರ್ಲೆ ಮತ್ತು ಫ್ರಾನ್ಸೆಸ್ಕಾ ಸಬಾಟಿನೆಲ್ಲಿರವರಿಂದ
ಇಸ್ಲಾಮಿಸ್ಟ್ ಬಂಡುಕೋರ ಪಡೆಗಳು ಸಿರಿಯಾದ ರಾಜಧಾನಿ ದಮಾಸ್ಕಸನ್ನು ಪ್ರವೇಶಿಸಿವೆ ಮತ್ತು ಅಧ್ಯಕ್ಷ ಅಲ್-ಅಸ್ಸಾದ್ ದೇಶದಿಂದ ಪಲಾಯನ ಮಾಡಿದ್ದಾರೆ.
ಬಂಡುಕೋರರು ಕಳೆದ ವಾರವಷ್ಟೇ ತಮ್ಮ ಮಿಂಚಿನ ಆಕ್ರಮಣವನ್ನು ಪ್ರಾರಂಭಿಸಿದರು, ದಮಾಸ್ಕಸ್‌ನ ಆಕ್ರಮಣದ ಮೊದಲು ಅಲೆಪ್ಪೊ, ಹಮಾ ಮತ್ತು ಹೋಮ್ಸ್ ನಗರಗಳನ್ನು ತ್ವರಿತ ಅನುಕ್ರಮವಾಗಿ ತೆಗೆದುಕೊಂಡರು.
ಭಾನುವಾರದ ಮುಂಜಾನೆ, 'ದಮಾಸ್ಕಸ್‌ನ ಪತನ ಮತ್ತು ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಸರ್ಕಾರದ ಅಂತ್ಯ' ಎಂದು ಘೋಷಿಸಲು ವಿರೋಧ ಪಡೆಗಳು ಆ ರಾಜ್ಯದ ದೂರದರ್ಶನ ಮತ್ತು ಆಕಾಶವಾಣಿ ಸಂಪರ್ಕವನ್ನು ಸ್ವಾಧೀನಪಡಿಸಿಕೊಂಡವು.
ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಜಲಾಲಿರವರು, ದೇಶದಲ್ಲಿ ಎಷ್ಟೇ ತೊಂದರೆಗಳು ಎದುರಾದರೂ, ತಮ್ಮ ಹುದ್ದೆಯಲ್ಲಿಯೇ ಉಳಿದು ಮತ್ತು ದೇಶದ ಆಡಳಿತದ ನಿರಂತರತೆಯನ್ನು ಬೆಂಬಲಿಸಲು ಸಿದ್ಧರಿದ್ದಾರೆ ಎಂದು ಹೇಳಿದರು.
ಹಯಾತ್ ತಹ್ರೀರ್ ಅಲ್-ಶಾಮ್ (HTS) ಬಂಡುಕೋರ ಗುಂಪಿನ ನಾಯಕ ಅಬು ಮೊಹಮ್ಮದ್ ಅಲ್-ಜುಲಾನಿರವರು, ತಮ್ಮ ಪಡೆಗಳು ಸಾರ್ವಜನಿಕ ಕಟ್ಟಡಗಳು ಮತ್ತು ಸಂಸ್ಥೆಗಳನ್ನು, ಸಮೀಪಿಸುವುದನ್ನು ನಿಷೇಧಿಸಿದ್ದಾರೆ, ತಮ್ಮ ಕೋರಿಕೆಗಳನ್ನು ಅಧಿಕೃತವಾಗಿ ಹಸ್ತಾಂತರಿಸುವವರೆಗೂ ದೇಶದ ಪ್ರಧಾನ ಮಂತ್ರಿಯ ಆರೈಕೆಯಲ್ಲಿರುತ್ತಾರೆ ಎಂದು ಅವರು ಹೇಳಿದ್ದಾರೆ.
ದಮಾಸ್ಕಸ್‌ನ ಪತನವು, ಅಸ್ಸಾದ್ ಕುಟುಂಬ ಮತ್ತು ಸಿರಿಯಾದ ಬಾತ್ ಪಾರ್ಟಿಯು ಸುಮಾರು 50 ವರ್ಷಗಳ ಆಡಳಿತವನ್ನು ನೆನಪಿಸುತ್ತದೆ. ಬಶರ್ ಅಲ್-ಅಸ್ಸಾದ್ ತನ್ನ ತಂದೆಯ ಉತ್ತರಾಧಿಕಾರಿಯಾದಾಗ ಸಮಾಜದ ಸುಧಾರಕನಾಗಿ ಕಾಣಿಸಿಕೊಂಡರು, ಆದರೆ ಅರಬ್ ನ ವಸಂತಕಾಲದಲ್ಲಿ ಪ್ರತಿಭಟನಾಕಾರರ ಮೇಲಿನ ದಮನದ ನಂತರ, ಅವರ ಮನದಲ್ಲಿದ್ದ ಸಮಾಜ ಸುಧಾರಕನೆಂಬ ಕಲ್ಪನೆಯ ಚಿತ್ರವು ಶೀಘ್ರದಲ್ಲೇ ನಾಶಗೊಂಡಿತು.
ಆ ಅವಧಿಯಲ್ಲಿ, ಅವರು ಬಂಡುಕೋರರ ಭದ್ರಕೋಟೆಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ ಸೇರಿದಂತೆ - ದುಷ್ಕೃತ್ಯಗಳೊಂದಿಗೆ ಸಂಬಂಧ ಹೊಂದಿದ್ದರು.
ಕೇವಲ ಒಂದು ವಾರದ ಹಿಂದೆ ಉಲ್ಬಣಗೊಂಡ ಹೋರಾಟದ ಈ ಸಂಕ್ಷಿಪ್ತ ದಂಗೆಯ ಮಧ್ಯದಲ್ಲಿ ಸಿಕ್ಕಿಬಿದ್ದ ನಾಗರಿಕರು ವಿಶ್ವಸಂಸ್ಥೆಯ ಘರ್ಷಣೆಯ ಹೊರೆಯನ್ನು ಹೊಂದಿದ್ದರು ಎಂದು ಹೇಳುವ ಮೂಲಕ 300,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ನೂರಾರು ನಾಗರಿಕರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಭಾವಿಸಲಾಗಿದೆ ಮತ್ತು ಕನಿಷ್ಠ 370,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆಯು ಹೇಳಿದೆ.
ಸಿರಿಯಾದಲ್ಲಿ ನಡೆಯುತ್ತಿರುವ ಕ್ರೂರವಾದ ಅಂತರ್ಯುದ್ಧವು 2011ರಲ್ಲಿ ಪ್ರಜಾಪ್ರಭುತ್ವದ ಪ್ರತಿಭಟನೆಗಳ ಮೇಲೆ ಅಸ್ಸಾದ್ ರವರ ದಮನದ ನಂತರ ಪ್ರಾರಂಭವಾಯಿತು.
ವ್ಯಾಟಿಕನ್ ಸುದ್ದಿಯ ಫ್ರಾನ್ಸೆಸ್ಕಾ ಸಬಾಟಿನೆಲ್ಲಿಯವರೊಂದಿಗೆ ಮಾತನಾಡುತ್ತಾ, ಸಿರಿಯಾದಲ್ಲಿದ್ದ ಪ್ರೇಷಿತ ರಾಯಭಾರಿ ಕಾರ್ಡಿನಲ್ ಮಾರಿಯೋ ಝೆನಾರಿರವರು, ದಮಾಸ್ಕಸ್‌ನಲ್ಲಿ ತಾವು ಕಳೆದ ಕೊನೆಯ ಗಳಿಗೆಯ ಬಗ್ಗೆ ಮತ್ತು ಪ್ರಜಾಪ್ರಭುತ್ವದ ಆಡಳಿತಕ್ಕೆ ಅಗತ್ಯವಾಗಿ ಬೇಕಾಗಿರುವ ಶಾಂತಿಯುತ ಪರಿವರ್ತನೆಯ ಭರವಸೆಯ ಬಗ್ಗೆ ಮಾತನಾಡಿದರು.