ಹುಡುಕಿ

PALESTINIAN-ISRAEL-CONFLICT PALESTINIAN-ISRAEL-CONFLICT  (AFP or licensors)

ಉತ್ತರದಲ್ಲಿ ಕ್ಷಾಮ ಆವರಿಸಿರುವುದರಿಂದ ಗಾಜಾದಲ್ಲಿ ಸಾವಿನ ಸಂಖ್ಯೆ 45,000 ದಾಟಿದೆ

ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಮುಖ್ಯಸ್ಥೆ, ಯುನಿಸೆಫ್, ಗಾಜಾದಲ್ಲಿ 14,500 ಕ್ಕೂ ಹೆಚ್ಚು ಯುವಕರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಮಾಡಿದೆ, ಏಕೆಂದರೆ ಗಾಜಾ ಅಧಿಕಾರಿಗಳ ಪ್ರಕಾರ ಒಟ್ಟು ಸಾವಿನ ಸಂಖ್ಯೆ 45,000 ದಾಟಿದೆ. ಮಾನವೀಯ ಸಂಸ್ಥೆಗಳು ಸಂತ್ರಸ್ಥರ ಆರೈಕೆಗಾಗಿ, ಕದನ ವಿರಾಮಕ್ಕಾಗಿ ಮನವಿ ಮಾಡುವುದನ್ನು ಮುಂದುವರೆಸುತ್ತವೆ ಮತ್ತು ತನ್ಮೂಲಕ ಅಗತ್ಯವಿರುವ ಆಹಾರದ ಸಹಾಯವನ್ನು ವಿತರಿಸುತ್ತಿವೆ.

ಥಡ್ಡಿಯಸ್ ಜೋನ್ಸ್

ಪ್ಯಾಲೇಸ್ತೀನಿನ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಸಂಸ್ಥೆ, UNRWA, ಯಾವುದೇ ಎಚ್ಚರಿಕೆಯಿಲ್ಲದೆ ಬಂದ ವೈಮಾನಿಕ ದಾಳಿಯಲ್ಲಿ 16 ಡಿಸೆಂಬರ್‌ನ ರಾತ್ರಿಯಲ್ಲಿ, 13 ಜನರು ಸಾವನ್ನಪ್ಪಿದರು ಮತ್ತು 48 ಮಂದಿ ಗಾಯಗೊಂಡರು ಎಂದು ವರದಿ ಮಾಡಿದೆ. ಬಲಿಯಾದವರಲ್ಲಿ ಅನೇಕರು ಮಕ್ಕಳು, ವಿಶ್ವಸಂಸ್ಥೆಯ ಶಾಲೆ-ಆಶ್ರಯವನ್ನು ಒಳಗೊಂಡಂತೆ ಯುದ್ಧ-ಹಾನಿಗೊಳಗಾದ ಗಾಜಾ ಗಡಿಯಾದ್ಯಂತ ಇತ್ತೀಚಿನ ಮಾರಣಾಂತಿಕ ವೈಮಾನಿಕ ದಾಳಿಗಳನ್ನು ಮಾನವೀಯ ಏಜೆನ್ಸಿಗಳು ಖಂಡಿಸಿವೆ. ಕೆಲವು ಸಂತ್ರಸ್ಥರನ್ನು ಏಳೆಂಟು ಬಾರಿ ಬಲವಂತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆಯು ವರದಿ ಮಾಡಿದೆ, ಬಾಂಬ್ ದಾಳಿಗೊಳಗಾದ ಈ UNRWA ಶಾಲೆಯಲ್ಲಿ ಅಂದಿನ ದಾಳಿ ಕೊನೆಗೊಂಡಿತು ಎಂದು ಹೇಳಿದ್ದಾರೆ, ಆದರೆ ಪರಿಸ್ಥಿತಿಯು "ಬಹಳ ಹತಾಶವಾಗಿದೆ" ಎಂದು ತಮ್ಮ ನುಡಿಗಳನ್ನು ಸೇರಿಸುತ್ತಾರೆ.

ಗಾಜಾ ಸಾವಿನ ಸಂಖ್ಯೆ ಅವ್ಯಾಹತವಾಗಿ ಏರುತ್ತಿದೆ
ಇತ್ತೀಚಿನ ಹಿಂಸಾಚಾರವು ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಮುಖ್ಯಸ್ಥೆ, ಯುನಿಸೆಫ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರೀನ್ ರಸೆಲ್ ರವರು, ಗಾಜಾದಲ್ಲಿ 14,500 ಕ್ಕೂ ಹೆಚ್ಚು ಯುವಕರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿ ಮಾಡಿದ್ದಾರೆ ಮತ್ತು ಇನ್ನೂ ಸಾವಿರಾರು ಜನರು ಕಟ್ಟಡಗಳ ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ನಂಬಲಾಗಿದೆ. ಮಾನವೀಯ ಪ್ರವೇಶವು "ತೀವ್ರವಾಗಿ ನಿರ್ಬಂಧಿಸಲ್ಪಟ್ಟಿದೆ" ಆದರೆ "ಉತ್ತರದಲ್ಲಿ ಮಗ್ಗಲು ಬರಗಾಲದ ಬಗ್ಗೆ ಎಚ್ಚರಿಕೆಯ ಸೂಚನೆಯನ್ನು ನೀಡಲಾಗುತ್ತಿದೆ" ಎಂದು ಅವರು ನೀಡಿದರು.

ಕಳೆದ 14 ತಿಂಗಳುಗಳಲ್ಲಿ ಈ ಗಡಿ ಪ್ರದೇಶದಲ್ಲಿ 45,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಅಧಿಕಾರಿಗಳು ವರದಿ ಮಾಡಿದ್ದರಿಂದ ಕಠೋರ ಬೆಳವಣಿಗೆಗಳು ಸಂಭವಿಸಿವೆ.

ಕಳೆದ 24 ಗಂಟೆಗಳಲ್ಲಿ ಇಸ್ರಯೇಲ್ ಮಿಲಿಟರಿ ದಾಳಿಗಳು ಉತ್ತರದ ಬೀಟ್ ಲಾಹಿಯಾದಿಂದ, ದಕ್ಷಿಣದ ರಾಫಾದಲ್ಲಿ ಕನಿಷ್ಠ 69 ಪ್ಯಾಲೆಸ್ತೀನಿಯಾದವರನ್ನು ಬಲಿತೆಗೆದುಕೊಂಡಿರುವುದರಿಂದ "ಗಾಜಾದಲ್ಲಿ ವಾಸ್ತವಿಕವಾಗಿ ಎಲ್ಲಾ 1.1 ಮಿಲಿಯನ್ ಮಕ್ಕಳಿಗೆ ರಕ್ಷಣೆ ಮತ್ತು ಮಾನಸಿಕ ಆರೋಗ್ಯದ ಬೆಂಬಲದ ತುರ್ತು ಅಗತ್ಯವಿದೆ" ಎಂದು ಕ್ಯಾಥರೀನ್ ರಸೆಲ್ ರವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

ನಿರ್ಬಂಧಿಸಿದ ಆಹಾರ ಸಹಾಯದ ಹತಾಶೆಯ ಅಗತ್ಯ
ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್‌ಪಿ) ತುರ್ತು ಸಂವಹನಗಳ ಮುಖ್ಯಸ್ಥ ಜೊನಾಥನ್ ಡುಮಾಂಟ್ ರವರು ವಿಶ್ವಸಂಸ್ಥೆಯು ವಾರ್ತಾ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ "ನಾಗರಿಕರು ಜೀವ ಉಳಿಸಿಕೊಳ್ಳುವ ಸಹಾಯಕ್ಕಾಗಿ ಹತಾಶರಾಗಿದ್ದಾರೆ ಮತ್ತು ವ್ಯಾಪಕವಾದ ಕ್ಷಾಮದ ಅಪಾಯವಿದೆ" ಎಂದು ಹೇಳಿದರು. ಅವರು ಗಾಜಾ ಗಡಿಯಾದ್ಯಂತ ವಿನಾಶದ ಮಟ್ಟವನ್ನು "ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸುವ" ಪರಿಸ್ಥಿತಿ ಇವರನ್ನು ಆವರಿಸಿದೆ ಎಂದು ವಿವರಿಸಿದರು ಮತ್ತು ಅನೇಕ ಜನರು, ಅನೇಕ ಬಾರಿ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಿದರು. ಕುಟುಂಬಗಳು, ಡೇರೆಗಳಲ್ಲಿ ಅಥವಾ ಕುಸಿದ ಕಟ್ಟಡಗಳ ಅವಶೇಷಗಳಲ್ಲಿ ವಾಸಿಸುತ್ತಿದ್ದಾರೆ, ವಿದ್ಯುತ್ ಅಥವಾ ಹರಿಯುವ ನೀರಿನ ಸೌಕರ್ಯದ ಸಾಧ್ಯತೆಯಿಲ್ಲದೆ ವಾಸಿಸುತ್ತಿದ್ದಾರೆ.

ಡುಮಾಂಟ್ ರವರು ಎಚ್ಚರಿಸಿದ್ದಾರೆ, "ವಿದ್ಯುತ್ ಅಥವಾ ಹರಿಯುವ ನೀರು ಅಥವಾ ಒಳಚರಂಡಿಗಳು (ಸಂಸ್ಕರಣೆ) ಇಲ್ಲ. ಇಲ್ಲಿ ಎಲ್ಲರೂ ಮನೆ ಕಳೆದುಕೊಂಡಿದ್ದಾರೆ. ಸಾಕಷ್ಟು ಜನರು ಡೇರೆಗಳಲ್ಲಿ ವಾಸಿಸುತ್ತಿದ್ದಾರೆ. ನಾವು ಬಿಸಿ ಊಟ, ವಿತರಣೆಗಳನ್ನು ಹೊಂದಿದ್ದೇವೆ... ಜನರು ನಿಜವಾಗಿಯೂ ಹತಾಶರಾಗಿದ್ದಾರೆ. ನೀವು ಇಂತಹ ವಿಷಮ ಪರಿಸ್ಥಿಯನ್ನು ಅವರ ಮುಖದಲ್ಲಿ ನೋಡಬಹುದು ಮತ್ತು ಅವರ ಕಣ್ಣುಗಳಲ್ಲಿಯೂ ನೋಡಬಹುದು. ಈ ಕ್ಷಾಮವನ್ನು ತಡೆಗಟ್ಟಲು ನಾವು ಆಹಾರದ ಸ್ಥಿರ ಲಭ್ಯತೆಯನ್ನು ಪಡೆಯುವ ಮಾರ್ಗವನ್ನು ಕಂಡುಹಿಡಿಯಬೇಕು.

17 December 2024, 11:00