2024.12.02 Assemblea generale EBU a Limassol 2024.12.02 Assemblea generale EBU a Limassol 

EBU: ಯುರೋಪಿನ ಆಕಾಶವಾಣಿ ಮತ್ತು ದೂರದರ್ಶನದ ಕಾರ್ಯನಿರ್ವಾಹಕರು ಸಾಮಾನ್ಯ ಸಭೆ ಸೇರುತ್ತಾರೆ

ವ್ಯಾಟಿಕನ್ ಆಕಾಶವಾಣಿಯ ಸ್ಥಾಪಕ ಸದಸ್ಯರಾಗಿರುವ ಯುರೋಪಿಯನ್ ಬ್ರಾಡ್‌ಕಾಸ್ಟಿಂಗ್ ಯೂನಿಯನ್, ಅದರ ಕಾರ್ಯಕಾರಿ ಮಂಡಳಿಯ ನವೀಕರಣದ ಕುರಿತು ಮತ ಚಲಾಯಿಸಲು ಮತ್ತು ರಾಜಕೀಯ ಮತ್ತು ಆರ್ಥಿಕ ಸಂದರ್ಭಗಳಲ್ಲಿ ಸವಾಲಿನ ಸಾರ್ವಜನಿಕ ಮಾಧ್ಯಮದ ಸ್ವಾಯತ್ತತೆಯನ್ನು ಅಥವಾ ಯಾಂತ್ರಿಕ ಬುದ್ಧಿಮತ್ತೆಯ (AI) ಬಗ್ಗೆ ಚರ್ಚಿಸಲು ಸ್ವಿಟ್ಜರ್ಲೆಂಡ್‌ನಲ್ಲಿ ಸಾಮಾನ್ಯ ಸಭೆಯನ್ನು ಕೈಗೊಳ್ಳಲು ಸಿದ್ಧವಾಗಿದೆ.

ವ್ಯಾಟಿಕನ್ ಸುದ್ಧಿಯ ಮೂಲಕ

EBU (ಯುರೋಪಿಯನ್ ಬ್ರಾಡ್‌ಕಾಸ್ಟಿಂಗ್ ಯೂನಿಯನ್)ನ 93 ನೇ ಸಾಮಾನ್ಯ ಸಭೆಯು ಗುರುವಾರ, ಡಿಸೆಂಬರ್ 5ರಂದು, ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿರುವ ಮಿಲೇನಿಯಮ್ ಕಾನ್ಫರೆನ್ಸ್ ಸೆಂಟರ್‌ನಲ್ಲಿ ನಡೆಯಲಿದೆ.EBU (ಯುರೋಪಿಯನ್ ಬ್ರಾಡ್‌ಕಾಸ್ಟಿಂಗ್ ಯೂನಿಯನ್) ನ 93 ನೇ ಸಾಮಾನ್ಯ ಸಭೆಯು ಗುರುವಾರ, ಡಿಸೆಂಬರ್ 5ರಂದು, ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿರುವ ಮಿಲೇನಿಯಮ್ ಕಾನ್ಫರೆನ್ಸ್ ಸೆಂಟರ್‌ನಲ್ಲಿ ನಡೆಯಲಿದೆ.

ಎರಡು ದಿನಗಳ ಈ ಕಾರ್ಯಕ್ರಮದಲ್ಲಿ, ಯುರೋಪಿನ ಸಾರ್ವಜನಿಕ ಸೇವಾ ಆಕಾಶವಾಣಿ ಮತ್ತು ದೂರದರ್ಶನ ಪ್ರಸಾರಕರ ಪ್ರತಿನಿಧಿಗಳು 2025-2026 ಅವಧಿಯವರೆಗೂ EBU ಕಾರ್ಯಕಾರಿ ಮಂಡಳಿಗೆ ಒಂಬತ್ತು ಸದಸ್ಯರ ಆಯ್ಕೆ ಸೇರಿದಂತೆ, ಪ್ರಮುಖ ಆಡಳಿತ ಸಮಸ್ಯೆಗಳನ್ನು ಕುರಿತು ಈ ಸಭೆಯಲ್ಲಿ ಚರ್ಚಿಸಲಿದ್ದಾರೆ.

ಜುಲೈ 2024ರಲ್ಲಿ ಸೈಪ್ರಸ್‌ನ ಲಿಮಾಸೋಲ್‌ನಲ್ಲಿ ನಡೆದ - ಸಾಮಾನ್ಯ ಸಭೆಯ ಬೇಸಿಗೆ ಅಧಿವೇಶನದಿಂದ ಹೂಡುವಳಿ/ಒಳಸೇರಿಕೆಯನ್ನು ಅಭಿವೃದ್ಧಿಪಡಿಸಲಾದ EBU ಕಂಪಾಸ್, ಕಾರ್ಯತಂತ್ರದ ಯೋಜನೆಯನ್ನು ಕೂಡ ಸಹ ಪ್ರಸ್ತುತಪಡಿಸಲಾಗುತ್ತದೆ.

ಈ ಉಪಕ್ರಮವು ರಾಜಕೀಯ ಮತ್ತು ಇತರ ಒತ್ತಡಗಳ ಮುಖಾಂತರ ಸಾರ್ವಜನಿಕ ಮಾಧ್ಯಮಗಳ ಸ್ವಾಯತ್ತತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಅದು ಅವರ ಧ್ಯೇಯವನ್ನು ಅಪಾಯಕ್ಕೆ ತರಬಹುದು.

ಲಾಸನ್ನೆ ಕಾರ್ಯಕ್ರಮವು ಕೃತಕ ಬುದ್ಧಿಮತ್ತೆಗೆ ಮೀಸಲಾಗಿರುವ ಯಾಂತ್ರಿಕ ಬುದ್ಧಿಮತ್ತೆಯ (AI) ಶೃಂಗಸಭೆಯ ಎರಡನೇ ಆವೃತ್ತಿಯೊಂದಿಗೆ ಹೊಂದಿಕೆಯಾಗಿರುತ್ತದೆ, ಈ ಕಾರ್ಯಕ್ರಮವು 6ರಂದು ನಡೆಯಲಿದೆ.

ಬೆಳಗಿನ ಅಧಿವೇಶನವು EBUನ ಎಲ್ಲಾ ಸದಸ್ಯರಿಗೆ ತೆರೆದಿರುತ್ತದೆ, ಮಧ್ಯಾಹ್ನಕ್ಕೆ ನಿಗದಿಪಡಿಸಲಾದ ಅಧಿಕೃತ ಮುಕ್ತಾಯದ ನಂತರವೂ ಸಹ ಸಾಮಾನ್ಯ ಸಭೆಯ ಪ್ರತಿನಿಧಿಗಳನ್ನು ಪೂರ್ಣ ಕಾರ್ಯಕ್ರಮಕ್ಕೆ ಹಾಜರಾಗಲು ಆಹ್ವಾನಿಸಲಾಗುತ್ತದೆ.

ಶೃಂಗಸಭೆಯಲ್ಲಿ 44 ದೇಶಗಳಿಂದ 400ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಭಾಷಣಕಾರರಲ್ಲಿ ಡರೆನ್ ಟ್ಯಾಂಗ್ ರವರು, WIPO (ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ)ನ ಮಹಾನಿರ್ದೇಶಕರು; ಫೆಡೆರಿಕೊ ಸುರಿಯಾರವರು, ಯುರೋಪ್ ಮತ್ತು ಮಧ್ಯಪ್ರಾಚ್ಯದ ಮೈಕ್ರೋಸಾಫ್ಟ್‌ನಲ್ಲಿ ಟೆಲ್ಕೊ ಮತ್ತು ಮಾಧ್ಯಮ ವಿಭಾಗಗಳ ಮುಖ್ಯಸ್ಥ; ಮತ್ತು ಇತಿಹಾಸಕಾರ ಮತ್ತು ಹೊಸ ತಂತ್ರಜ್ಞಾನಗಳ ಪರಿಣಿತರಾದ ಯುವಲ್ ನೋಹ್ ಹರಾರಿರವರು ಭಾಗವಹಿಸಲಿದ್ದಾರೆ.

EBUನ ಸ್ಥಾಪಕ ಸದಸ್ಯರಾದ ವ್ಯಾಟಿಕನ್ ರೇಡಿಯೋ, ಡಿಕ್ಯಾಸ್ಟರಿ ಫಾರ್ ಕಮ್ಯುನಿಕೇಶನ್‌ನ (ನಮ್ಮ ಮೂಲ ಸಂಸ್ಥೆ) ಉಪ ಸಂಪಾದಕೀಯ ನಿರ್ದೇಶಕ ಅಲೆಸ್ಸಾಂಡ್ರೊ ಗಿಸೊಟ್ಟಿರವರ ಉಪಸ್ಥಿತಿಯೊಂದಿಗೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸುತ್ತಾರೆ.

ವ್ಯಾಟಿಕನ್ ಪ್ರಸಾರಕರ ಒಳಗೊಳ್ಳುವಿಕೆ ಅಂತರರಾಷ್ಟ್ರೀಯ ಸನ್ನಿವೇಶದಲ್ಲಿ ಸಾಂಪ್ರದಾಯಿಕ ಮಾಧ್ಯಮ ಮತ್ತು ತಾಂತ್ರಿಕ ಆವಿಷ್ಕಾರಗಳ ನಡುವಿನ ಸಹಯೋಗದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ, ಜ್ಯೂಬಿಲಿಯಂತಹ ಪ್ರಮುಖ ಜಾಗತಿಕ ಕಾರ್ಯಕ್ರಮದ ಪ್ರಾರಂಭದ ಕೆಲವೇ ದಿನಗಳ ಮೊದಲು ಈ ವಿಷಯವು ಎಲ್ಲಾ ಪ್ರಮುಖ ನೆಟ್‌ವರ್ಕ್‌ಗಳ ಜಾಲಸಂಪರ್ಕಗಳ ಗಮನವನ್ನು ಸೆಳೆಯುವುದು EBUಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ.

ಯುರೋಪಿಯನ್ ಬ್ರಾಡ್‌ಕಾಸ್ಟಿಂಗ್ ಯೂನಿಯನ್ ಜಿನೀವಾದಲ್ಲಿ ನೆಲೆಗೊಂಡಿರುವ ವಿಶ್ವದ ಪ್ರಮುಖ ಸಾರ್ವಜನಿಕ ಸೇವಾ ಮಾಧ್ಯಮ ಸಂಘವಾಗಿದ್ದು, 56 ದೇಶಗಳಲ್ಲಿ 112 ಸಾರ್ವಜನಿಕ ಪ್ರಸಾರಕರನ್ನು 31 ಸಹವರ್ತಿ ಪಾಲುದಾರರೊಂದಿಗೆ ಒಟ್ಟುಗೂಡಿಸುತ್ತದೆ.

ಎರಡು ದಿನಗಳ ಈ ಕಾರ್ಯಕ್ರಮದಲ್ಲಿ, ಯುರೋಪಿನ ಸಾರ್ವಜನಿಕ ಸೇವಾ ಆಕಾಶವಾಣಿ ಮತ್ತು ದೂರದರ್ಶನ ಪ್ರಸಾರಕರ ಪ್ರತಿನಿಧಿಗಳು 2025-2026 ಅವಧಿಯವರೆಗೂ EBU ಕಾರ್ಯಕಾರಿ ಮಂಡಳಿಗೆ ಒಂಬತ್ತು ಸದಸ್ಯರ ಆಯ್ಕೆ ಸೇರಿದಂತೆ, ಪ್ರಮುಖ ಆಡಳಿತ ಸಮಸ್ಯೆಗಳನ್ನು ಕುರಿತು ಈ ಸಭೆಯಲ್ಲಿ ಚರ್ಚಿಸಲಿದ್ದಾರೆ.

1950ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯು ತನ್ನ ಸದಸ್ಯರ ನಡುವೆ ಸಹಕಾರವನ್ನು ಉತ್ತೇಜಿಸುತ್ತದೆ, ಉತ್ತಮ ಗುಣಮಟ್ಟದ ವಿಷಯದ ಉತ್ಪಾದನೆ ಮತ್ತು ವಿತರಣೆಯನ್ನು ಬೆಂಬಲಿಸುವ ಮತ್ತು ಪ್ರಸಾರ ಕ್ಷೇತ್ರದಲ್ಲಿ ತಾಂತ್ರಿಕ ಪ್ರಗತಿಯನ್ನು ಮುಂದುವರಿಸುವ ನಿರ್ದಿಷ್ಟ ಗಮನವನ್ನು ಹೊಂದಿದೆ.

04 December 2024, 12:38