ಸಿರಿಯಾದ ಅಲೆಪ್ಪೊ ನಗರದಲ್ಲಿ ಫ್ರಾನ್ಸಿಸ್ಕನ್ ರವರ ಪವಿತ್ರ ನಾಡಿನ ಕಾಲೇಜಿನಲ್ಲಿ ಬಾಂಬ್ ದಾಳಿ
ಕೀಲ್ಸ್ ಗುಸ್ಸಿರವರಿಂದ
ಸಿರಿಯಾದ ಅಲೆಪ್ಪೊದಲ್ಲಿರುವ ಪವಿತ್ರ ನಾಡಿನ ಕಾಲೇಜಿನ ಫ್ರಾನ್ಸಿಸ್ಕನ್ ರವರ ಸಂಕೀರ್ಣವು, ಡಿಸೆಂಬರ್ 1ರಂದು ನಡೆದ ರಷ್ಯಾದ ದಾಳಿಯಿಂದ ಹೆಚ್ಚು ಹಾನಿಗೊಳಗಾಯಿತು. ಪವಿತ್ರ ನಾಡಿನ ರಕ್ಷಣೆಯಲ್ಲಿರುವ ಫ್ರಾನ್ಸಿಸ್ಕನ್ ನಾಗರೀಕರು ಈ ದಾಳಿಯಲ್ಲಿ, ಯಾವುದೇ ಬಲಿಪಶುಗಳಿಲ್ಲ ಎಂದು ದೃಢಪಡಿಸಿದರು.
ಕಾಲೇಜು ದೇವಾಲಯದ ಸಮೀಪದಲ್ಲಿರುವ ಮಠದ ಒಳಭಾಗದಲ್ಲಿದ್ದು, ಅದೇ ದಿನ ಸಂಜೆ, ಅಲ್ಲಿ ಪೂಜಾರಾಧನೆಯ ವಿಧಿಯನ್ನು ಆಚರಿಸುವಂತೆ ನಿರ್ಧರಿಸಲಾಗಿತ್ತು.
ಭಾರೀ ಪ್ರಮಾಣದ ಹಾನಿಯಾಗಿದೆ, ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ
ಪವಿತ್ರ ನಾಡಿನ ಮುಖ್ಯಸ್ಥರಾದ (ದಿ ಕಸ್ಟಸ್ ಆಫ್ ದಿ ಹೋಲಿ ಲ್ಯಾಂಡ್), ಧರ್ಮಗುರು. ಫ್ರಾನ್ಸೆಸ್ಕೊ ಪ್ಯಾಟನ್ ರವರು, "ದೇವರಿಗೆ ಧನ್ಯವಾದಗಳನ್ನು ಸಲ್ಲಿಸಿ, ದೇವರ ದಯೆಯಿಂದ, ಯಾವುದೇ ಸಾವುನೋವುಗಳು ಸಂಭವಿಸಲಿಲ್ಲ ಅಥವಾ ಯಾರಿಗೂ ಗಾಯಗಳಾಗಲಿಲ್ಲ; ಕಟ್ಟಡಕ್ಕೆ ಮಾತ್ರ ಹಾನಿಯಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ದೃಢಪಡಿಸಿದರು.
ಇಲ್ಲಿನ ಎಲ್ಲಾ ಸನ್ಯಾಸಿಗಳು ಮತ್ತು ಧರ್ಮಕೇಂದ್ರದ ಸದಸ್ಯರು ಉತ್ತಮವಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು “ಫ್ರಾನ್ಸಿಸ್ಕನ್ ಧರ್ಮಪ್ರಾಂತ್ಯದ ಕಾರ್ಯಾಲಯದವರು, ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ" ಎಂದು ಅವರು ವರದಿ ಮಾಡಿದರು.
"ಮುಂದುವರೆಯುತ್ತಿರುವ ಮುಖಾಮುಖಿಯ ಅನಿರೀಕ್ಷಿತ ಬೆಳವಣಿಗೆಗಳ" ಕುರಿತು ಸಮುದಾಯವು "ಅಲೆಪ್ಪೊದ ನಾಗರಿಕರಲ್ಲಿ ಬೆಳೆಯುತ್ತಿರುವ ಉದ್ವೇಗ ಮತ್ತು ಭಯ"ವನ್ನು ಅನುಭವಿಸುತ್ತದೆ ಎಂದು ಕಸ್ಟೋಸ್ ರವರು ವಿವರಿಸಿದರು.
ಪವಿತ್ರ ನಾಡಿನಲ್ಲಿರುವ ಎಲ್ಲಾ ಕ್ರೈಸ್ತರು ಮತ್ತು ಎಲ್ಲಾ ದೇವಾಲಯಗಳು "ಸುಧೀರ್ಘ ವರ್ಷಗಳ ಯುದ್ಧ ಮತ್ತು ಹಿಂಸಾಚಾರದಿಂದ ಧ್ವಂಸಗೊಂಡಿರುವ ಸಿರಿಯಾದಲ್ಲಿ ಶಾಂತಿ ನೆಲೆಸುವಂತೆ, ನಾಗರೀಕರೆಲ್ಲನ್ನೂ ಪ್ರಾರ್ಥನೆಯಲ್ಲಿ" ಒಗ್ಗೂಡುವಂತೆ ಪ್ಯಾಟನ್ ರವರು ಒತ್ತಾಯಿಸಿದರು.
ಸಿರಿಯಾ: ಒಂದು ದಶಕಕ್ಕೂ ಹೆಚ್ಚು ಕಾಲಾವಧಿಯ ಸಂಘರ್ಷ
ಕಳೆದ ಐದು ದಿನಗಳಲ್ಲಿ ಹಿಂಸಾಚಾರದ ಸ್ಫೋಟದ ನಂತರ ಅಲೆಪ್ಪೊದಲ್ಲಿ ಹಾನಿಗೊಳಗಾದ ಅನೇಕ ಸ್ಥಳಗಳಲ್ಲಿ ಕಾಲೇಜೂ ಸಹ ಒಂದಾಗಿದೆ- ಇದು ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ.
ಹನ್ನೆರಡು ವರ್ಷಗಳ ಹಿಂದೆ, ಸಿರಿಯನ್ ಅಂತರ್ಯುದ್ಧವು ಪ್ರಜಾಪ್ರಭುತ್ವ ಪರ ಪ್ರದರ್ಶನಕಾರರು ಮತ್ತು ಸರ್ಕಾರಿ ಪಡೆಗಳ ನಡುವಿನ ರಾಜಕೀಯ ಸಂಘರ್ಷವಾಗಿ ಪ್ರಾರಂಭವಾಯಿತು.
ತದನಂತರ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ವಿರುದ್ಧ ಜಿಹಾದಿಸ್ಟ್ ಬಂಡುಕೋರರ ಈ ಹೊಸ ಮುನ್ನಡೆಯೊಂದಿಗೆ, ಮಾನವ ಹಕ್ಕುಗಳ ಸಿರಿಯನ್ ವೀಕ್ಷಣಾಲಯದ ಕಾರ್ಯಕರ್ತರು 2012ರಿಂದ ಮೊದಲ ಬಾರಿಗೆ ಅಲೆಪ್ಪೊವನ್ನು ಈ ಬಂಡುಕೋರರಿಂದ ಆಕ್ರಮಿಸಿಕೊಂಡಿದ್ದಾರೆ ಎಂದು ದೃಢಪಡಿಸಿದರು.
ಡಿಸೆಂಬರ್ 1ರಂದು, ಸಿರಿಯನ್-ರಷ್ಯಾದ ಜಂಟಿ ವಾಯುಪಡೆಗಳು ಅಲೆಪ್ಪೊದ ಹೊರವಲಯ ನಗರದಲ್ಲಿ ವೈಮಾನಿಕ ದಾಳಿಗಳನ್ನು ನಡೆಸಿದವು ಎಂದು ಸಿರಿಯನ್ ರಾಜ್ಯ ಸುದ್ದಿ ಸಂಸ್ಥೆಯು SANA ವರದಿ ಮಾಡಿದೆ.
ಭರವಸೆಯನ್ನು ಹಿಡಿದಿಟ್ಟುಕೊಳ್ಳುವುದು
ವಿಶ್ವಸಂಸ್ಥೆಯ ವರದಿಗಳ ಪ್ರಕಾರ ನವೆಂಬರ್ 27ರಂದು ಹಿಂಸಾಚಾರ ಪ್ರಾರಂಭವಾದಾಗಿನಿಂದ, 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 15,000 ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ.
ಬಂಡುಕೋರರ ಪಡೆಗಳು ಸಿರಿಯಾದ ಹಮಾ ಪ್ರದೇಶವನ್ನು ಪ್ರವೇಶಿಸಿರುವುದರಿಂದ ಈ ಅಂಕಿಅಂಶಗಳು ಅಥವಾ ಸಾವಿನ ಸಂಖ್ಯೆಗಳು ಹೆಚ್ಚಾಗುವ ನಿರೀಕ್ಷೆಯಿದೆ. ವಿಶ್ವಸಂಸ್ಥೆಯೂ ಸಹ ಅಲೆಪ್ಪೊದಿಂದ ಡಮಾಸ್ಕಸ್‌ಗೆ ಸ್ಥಳಾಂತರಿಸುವಿಕೆಯನ್ನು ಪ್ರಾರಂಭಿಸಿದೆ ಎಂದು ವರದಿ ನೀಡಲಾಗಿದೆ.
ಅಲೆಪ್ಪೊದ ಕೆಲವು ನಿವಾಸಿಗಳು ಸಾಮಾಜಿಕ ಜಾಲತಾಣದ ಮೂಲಕ ಈ ಕೆಳಕಂಡ ವಿಷಯಗಳನ್ನು ಹಂಚಿಕೊಂಡಿದ್ದಾರೆ, ಇನ್ನು ಮುಂದೆ "ಈ ನಾಟಕೀಯ ಪರಿಸ್ಥಿತಿಯಲ್ಲಿ ಇನ್ನು ಮುಂದೆ ಬದುಕುವುದಿಲ್ಲ" ಎಂಬ ಒಂದು ಭರವಸೆಯ ಕೊಂಡಿಯನ್ನು ಹಿಡಿದು "ದಿನದಿಂದ ದಿನಕ್ಕೆ ತಮ್ಮ ಬದುಕನ್ನು ನಡೆಸುತ್ತಿದ್ದಾರೆ" ಎಂದು ಆಶ್ಚರ್ಯ ಪಡುತ್ತಿದ್ದಾರೆ, ಇದರೊಂದಿಗೆ ಬಾಂಬ್ ದಾಳಿಗಳು, ಕರ್ಫ್ಯೂಗಳು, ಗಾರೆ ಬೆಂಕಿ ಮತ್ತು ಸ್ನೈಪರ್‌ಗಳ ನಡುವೆ ಹೇಗೆ ತಮ್ಮ "ದೈನಂದಿನ ಜೀವನವು ಸುಲಭವಲ್ಲ" ಎಂದು ಅವರು ವಿವರಿಸುತ್ತಾರೆ.