ವಿಶ್ವಸಂಸ್ಥೆ: 2024ರಲ್ಲಿ ́ಸಾವಿನ ಪ್ರಯಾಣದಲ್ಲಿ ಅತಿ ಹೆಚ್ಚಿನವರು ವಲಸಿಗರು'
ಡೆವಿನ್ ವಾಟ್ಕಿನ್ಸ್
ಅಂತರರಾಷ್ಟ್ರೀಯ ವಲಸಿಗರ ದಿನವನ್ನು ಬುಧವಾರದಂದು ಆಚರಿಸಲಾಯಿತು, ಈ ವರ್ಷವೂ ಇತರ ದೇಶಗಳಿಗೆ ಪ್ರಯಾಣ ಮಾಡುವ ಸಮಯದಲ್ಲಿ ಸಾವನ್ನಪ್ಪಿದವರಲ್ಲಿ, ಅತಿ ಹೆಚ್ಚು ವಲಸಿಗರ ಸಂಖ್ಯೆಯನ್ನು ಹೆಚ್ಚಿಸಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ರವರ ಪ್ರಕಾರ, ವಲಸಿಗರ ವಾಕ್ಚಾತುರ್ಯವು ಉತ್ತಮ ಜೀವನವನ್ನು ಜೀವಿಸಲು ಬಯಸುವ ಜನರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ.
"ಈ ಸವಾಲುಗಳು ಹೆಚ್ಚುತ್ತಿರುವ ಸಮಯದಲ್ಲಿ, ತಪ್ಪು ಮಾಹಿತಿ ಮತ್ತು ದ್ವೇಷದ ಮಾತುಗಳಿಂದ ಇನ್ನಷ್ಟು ಹದಗೆಡುತ್ತಿವೆ, ಇದು ಜನರ ಮನದಲ್ಲಿ ವಿಭಜನೆಯನ್ನು ಬಿತ್ತುತ್ತದೆ ಮತ್ತು ವಲಸಿಗರು ಪ್ರತಿದಿನ ನೀಡುತ್ತಿರುವ ಅಮೂಲ್ಯ ಕೊಡುಗೆಗಳನ್ನು ವಿರೂಪಗೊಳಿಸುತ್ತದೆ" ಎಂದು ಅವರು ಹೇಳಿದರು.
ಅಲ್ಜೀರಿಯಾ, ಈಜಿಪ್ಟ್, ಲಿಬಿಯಾ ಮತ್ತು ಟುನೀಶಿಯಾದಿಂದ ಇಟಲಿ ಮತ್ತು ಮಾಲ್ಟಾಕ್ಕೆ ಹೋಗಲು ಸಮುದ್ರವನ್ನು ದಾಟುವ ಮಧ್ಯ ಮೆಡಿಟರೇನಿಯನ್ ಮಾರ್ಗವು ವಲಸಿಗರಿಗೆ ಅತ್ಯಂತ ಮಾರಕವಾಗಿದೆ.
ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್/ ಅಂತರರಾಷ್ಟ್ರೀಯ ವಲಸಿಗರ ಸಂಸ್ಥೆಯ (IOM) ಪ್ರಕಾರ, 2023ರಲ್ಲಿ ಗಾಳಿ ತುಂಬಬಹುದಾದ ತೆಪ್ಪಗಳು ಅಥವಾ ಡಿಂಗಿಗಳಲ್ಲಿ ದಾಟಲು ಪ್ರಯತ್ನಿಸುವಾಗ ಸುಮಾರು 2,500 ಜನರು ಸಾವನ್ನಪ್ಪಿದ್ದಾರೆ ಅಥವಾ ಕಾಣೆಯಾಗಿದ್ದಾರೆ.
ವಲಸಿಗರ ಸ್ಥಿತಿಸ್ಥಾಪಕತ್ವ ಮತ್ತು ಭರವಸೆಯ ಕಥೆಗಳು
IOMನ ಪ್ರಧಾನ ನಿರ್ದೇಶಕಿ, ಆಮಿ ಪೋಪ್ ರವರು ಅಂತರರಾಷ್ಟ್ರೀಯ ವಲಸಿಗರ ದಿನವು ಪ್ರಯಾಣದಲ್ಲಿ ಸಾವನ್ನಪ್ಪಿದ ಅನೇಕ ಜನರನ್ನು ನೆನಪಿಸಿಕೊಳ್ಳುವುದು ಮಾತ್ರವಲ್ಲದೆ "ವಿಶ್ವದಾದ್ಯಂತ ಲಕ್ಷಾಂತರ ವಲಸಿಗರ ಅಮೂಲ್ಯ ಕೊಡುಗೆಗಳನ್ನು" ಎತ್ತಿ ತೋರಿಸಲು ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.
ಸಂಘರ್ಷಗಳು, ಹವಾಮಾನ ಸಂಬಂಧಿತ ವಿಪತ್ತುಗಳು ಮತ್ತು ಆರ್ಥಿಕ ಸಂಕಷ್ಟಗಳು ಸೇರಿದಂತೆ ಜನರು ತಮ್ಮ ಮನೆಗಳನ್ನು ತೊರೆಯುವಂತೆ ಒತ್ತಾಯಿಸುವ ಜಾಗತಿಕ ಅಂಶಗಳ ಬಗ್ಗೆ ಅವರು ವಿಷಾದಿಸಿದರು.
ಅಂತರರಾಷ್ಟ್ರೀಯ ದಿನವು 2025ಕ್ಕೆ IOMನ ಜಾಗತಿಕ ಮನವಿಯನ್ನು ಪ್ರಾರಂಭಿಸಿತು, ಇದು 170 ದೇಶಗಳಲ್ಲಿ 101 ಮಿಲಿಯನ್ ಜನರನ್ನು ತಲುಪುವ ಯೋಜನೆಗಳನ್ನು ಬೆಂಬಲಿಸುತ್ತದೆ.
ನಿಧಿಯ ಮನವಿ - ಶ್ರೀಮತಿ. ಪೋಪ್ ರವರು, IOM ತನ್ನ ಮೂರು ಕಾರ್ಯತಂತ್ರದ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ: ಅವು ಯಾವುವೆಂದರೆ ಜೀವಗಳನ್ನು ಉಳಿಸುವುದು, ಪ್ರಯಾಣಿಸುತ್ತಿರುವ ಜನರನ್ನು ರಕ್ಷಿಸುವುದು ಮತ್ತು ಸ್ಥಳಾಂತರಕ್ಕೆ ಪರಿಹಾರಗಳನ್ನು ಚಾಲನೆ ಮಾಡುವುದು.
ವಲಸಿಗರಿಗೆ ಧರ್ಮಸಭೆಯ ಬೆಂಬಲ
ಕಥೋಲಿಕ ಧರ್ಮಸಭೆಯು ತನ್ನದೇ ಆದ ವಿಶ್ವ ವಲಸಿಗರ ಮತ್ತು ನಿರಾಶ್ರಿತರ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ ಕೊನೆಯ ಭಾನುವಾರದಂದು ಆಚರಿಸುತ್ತದೆ.
ಈ ವರ್ಷ 110ನೇ ಆವೃತ್ತಿಯನ್ನು ಆಚರಿಸಲಾಗಿದೆ ಮತ್ತು ಅದೂ "ದೇವರು ತನ್ನ ಜನರೊಂದಿಗೆ ನಡೆಯುತ್ತಾನೆ" ಎಂಬ ವಿಷಯದ ಮೇಲೆ ಕೇಂದ್ರೀಕರಿಸಿದೆ.
ವಿಶ್ವಗುರು ಫ್ರಾನ್ಸಿಸ್ ರವರು ತಮ್ಮ ಸಂದೇಶದಲ್ಲಿ, ಭೂಮಿಯ ಮೇಲಿನ ಎಲ್ಲಾ ಜನರು ವಲಸಿಗರು ಎಂದು ಎಲ್ಲರಿಗೂ ನೆನಪಿಸಿದರು, ಏಕೆಂದರೆ ನಾವು ನಮ್ಮ ಸ್ವರ್ಗೀಯ ತಾಯ್ನಾಡು, ಸ್ವರ್ಗ ಸಾಮ್ರಾಜ್ಯದ ಕಡೆಗೆ ಪ್ರಯಾಣಿಸುತ್ತಿದ್ದೇವೆ.
"ಅವರ ಭರವಸೆಯ ಪ್ರಯಾಣಗಳು" "ನಮ್ಮ ಪೌರತ್ವವು ಸ್ವರ್ಗದಲ್ಲಿದೆ ಮತ್ತು ಅಲ್ಲಿಂದ ನಾವು ರಕ್ಷಕ, ಪ್ರಭು ಯೇಸುಕ್ರಿಸ್ತನನ್ನು ನಿರೀಕ್ಷಿಸುತ್ತಿದ್ದೇವೆ" ಎಂದು ನಮಗೆ ನೆನಪಿಸುತ್ತದೆ ಎಂದು ವಿಶ್ವಗುರು ಫ್ರಾನ್ಸಿಸ್ ರವರು ಹೇಳಿದರು.