ಎರಡು ತಿಂಗಳ ಕಾಲ ಗಾಜಾಕ್ಕೆ ಮಾನವೀಯ ನೆರವನ್ನು 'ನಿರ್ಬಂಧಿಸಲಾಗಿದೆ'
ನಾಥನ್ ಮೊರ್ಲೆರವರಿಂದ
ಕಳೆದ 66 ದಿನಗಳಿಂದ ಗಾಜಾಕ್ಕೆ ಮಾನವೀಯ ನೆರವು ನೀಡುವುದನ್ನು ಹೆಚ್ಚಾಗಿ ನಿರ್ಬಂಧಿಸಲಾಗಿದೆ ಎಂದು ವಿಶ್ವಸಂಸ್ಥೆಯು ಹೇಳಿದೆ.
ಸುಮಾರು 75,000 ಪ್ಯಾಲೆಸ್ತೀನಿಯರು ಆಹಾರ, ನೀರು, ವಿದ್ಯುತ್ ಅಥವಾ ಯಾವುದೇ ರೀತಿಯ ಆರೋಗ್ಯ ರಕ್ಷಣೆಯ ಸೌಕರ್ಯವಿಲ್ಲದೆ ಇದ್ದಾರೆ ಎಂದು ಭಾವಿಸಲಾಗಿದೆ.
ವಾಸ್ತವವಾಗಿ, ಅಂದಾಜು 26,000 ಪ್ಯಾಲೆಸ್ತೀನಿಯರು ಕಳೆದ ವರ್ಷದಲ್ಲಿ ಉಂಟಾದ ಗಾಯಗಳಿಂದ ಬಳಲುತ್ತಿದ್ದಾರೆ - ಅದರಲ್ಲಿಯೂ ವಿಕಲಾಂಗ ಜನರು ಆಘಾತದಿಂದ ಬಳಲುತ್ತಿದ್ದಾರೆ, ಪುನರ್ವಸತಿ ಸೇವೆಗಳ ಕೊರತೆ ಮತ್ತು ಸಹಾಯಕ ಸಾಧನಗಳ ಅಸಮರ್ಪಕ ಲಭ್ಯತೆಯಿಂದ ಬಳಲುತ್ತಿದ್ದಾರೆ.
ಅಕ್ಟೋಬರ್ 2023 ರಿಂದ, ಗಾಜಾದೊಳಗಿನ 273 ವಿಶ್ವ ಆರೋಗ್ಯ ಸಂಸ್ಥೆಯ (WHO) ನೇತೃತ್ವದ ಕಾರ್ಯಾಚರಣೆಗಳಲ್ಲಿ 58 ಪ್ರತಿಶತವನ್ನು ತಿರಸ್ಕರಿಸಲಾಗಿದೆ, ರದ್ದುಗೊಳಿಸಲಾಗಿದೆ ಅಥವಾ ಅಡ್ಡಿಪಡಿಸಲಾಗಿದೆ.
ವಿದೇಶಿಯರ ಗಡಿ ಹೊರಗೆ ವೈದ್ಯಕೀಯ ತಜ್ಞರ ಬೆಂಬಲದ ಅಗತ್ಯವಿರುವ ರೋಗಿಗಳನ್ನು ಸ್ಥಳಾಂತರಿಸುವ ತುರ್ತು ಮತ್ತು ಅತ್ಯಂತ ಕಷ್ಟಕರವಾದ ಕೆಲಸದ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದೆ.
ಇದಕ್ಕೂ ಮೊದಲು ಮಾತನಾಡಿದ ವಿಶ್ವಸಂಸ್ಥೆಯು, ಮಾನವೀಯ ಮತ್ತು ಗಾಜಾದ ಪುನರ್ನಿರ್ಮಾಣ ಸಂಯೋಜಕ ಸಿಗ್ರಿಡ್ ಕಾಗ್ ನಾಗರಿಕರು "ಸಂಪೂರ್ಣ ವಿನಾಶಕಾರಿ ಪರಿಸ್ಥಿತಿಯನ್ನು" ಎದುರಿಸುತ್ತಿದ್ದಾರೆ ಎಂದು ಹೇಳಿದರು.
OCHA ಸಂಸ್ಥೆಯು ಹೇಳುವುದೇನೆಂದರೆ ಕೇವಲ ನಾಲ್ಕು ವಿಶ್ವಸಂಸ್ಥೆಯ ಬೆಂಬಲಿತ ಬೇಕರಿಗಳು ಗಾಜಾ ಪಟ್ಟಿಯಾದ್ಯಂತ ಕಾರ್ಯನಿರ್ವಹಿಸುತ್ತಿವೆ, ಈ ಎಲ್ಲಾ ಬೆಂಬಲಿತ ಬೇಕರಿಗಳು ಗಾಜಾ ನಗರದಲ್ಲಿವೆ.
ಇದಲ್ಲದೆ, ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿನ ಜನರ ಮಾನವೀಯ ಅಗತ್ಯಗಳನ್ನು ಪರಿಹರಿಸಲು ಕನಿಷ್ಠ ವಿಶ್ವಸಂಸ್ಥೆಯ $ 6.6 ಶತಕೋಟಿ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಲೆಕ್ಕಾಚಾರ ಮಾಡುತ್ತದೆ.
ಗಾಜಾ ಸಿವಿಲ್ ಡಿಫೆನ್ಸ್/ ಗಾಜಾ ನಾಗರಿಕ ರಕ್ಷಣೆಯನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿ ಸಂಸ್ಥೆಯು ಹೇಳುವ ಪ್ರಕಾರ, ಉತ್ತರ ಗಾಜಾದ ಬೀಟ್ ಲಾಹಿಯಾ ಪಟ್ಟಣದ ಮೇಲೆ ಇಸ್ರಯೇಲಿನ ಪುನರಾವರ್ತಿತ ವೈಮಾನಿಕ ದಾಳಿಯ ನಂತರ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ.
ಮೃತರನ್ನು ಸ್ವೀಕರಿಸಿರುವುದಾಗಿ ಕಮಲ್ ಅಡ್ವಾನ್ ಆಸ್ಪತ್ರೆಯವರು ವರದಿ ನೀಡಿದ್ದಾರೆ. ದಾಳಿಯ ಕುರಿತು ಐಡಿಎಫ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.