ಹುಡುಕಿ

PALESTINIAN-ISRAEL-JERUSALEM-RELIGION-CHRISTIANITY-GOOD FRIDAY PALESTINIAN-ISRAEL-JERUSALEM-RELIGION-CHRISTIANITY-GOOD FRIDAY  (AFP or licensors)

'ಆಡಳಿತಾತ್ಮಕ ಬಂಧನ'ದಿಂದ ಇಬ್ಬರು ಯುವ ಪ್ಯಾಲೆಸ್ತೀನಿನ ಮಹಿಳೆಯರ ಬಿಡುಗಡೆ

8 ತಿಂಗಳ ಕಾಲ 'ಆಡಳಿತಾತ್ಮಕ ಬಂಧನ'ದಡಿಯಲ್ಲಿದ್ದ ಇಬ್ಬರು ಪ್ಯಾಲೆಸ್ತೀನ್ ಯುವತಿಯರನ್ನು ಇಸ್ರಯೇಲ್ ಬಿಡುಗಡೆ ಮಾಡಿದೆ, ಪವಿತ್ರ ಅಧಿಕಾರ ಪೀಠವು ಪ್ಯಾಲೆಸ್ತೀನಿನ ರಾಯಭಾರಿಯ ಸುದ್ದಿಯನ್ನು ಸ್ವಾಗತಿಸಿದ್ದಾರೆ.

ರಾಬರ್ಟೊ ಪಗ್ಲಿಯಾಲೊಂಗಾರವರಿಂದ

ಇಸ್ರಯೇಲ್‌ನಲ್ಲಿ "ಆಡಳಿತಾತ್ಮಕ ಬಂಧನ" ದಡಿಯಲ್ಲಿ ಬಂಧಿಸಲ್ಪಟ್ಟ ಯುವ ಪ್ಯಾಲೇಸ್ತೀನಿನ ಕ್ರೈಸ್ತ ಮಹಿಳೆ ಲಿಯಾನ್ ನಾಸರ್ ಡಿಸೆಂಬರ್ 5ರಂದು ಇನ್ನೊಬ್ಬ ಯುವತಿ ಲಿಯಾನ್ ಕೈಡ್ ಜೊತೆಗೆ ಬಿಡುಗಡೆಯಾದರು.

ಎಂಟು ತಿಂಗಳ ಸೆರೆವಾಸದ ನಂತರ ಆಕೆಯ ಬಿಡುಗಡೆಯ ಸುದ್ದಿಯನ್ನು ಟೆಲಿಗ್ರಾಮ್ ಮೂಲಕ ಹಂಚಿಕೊಂಡರು ಮತ್ತು ನಂತರ ಪವಿತ್ರ ಅಧಿಕಾರ ಪೀಠವು ಪ್ಯಾಲೆಸ್ತೀನಿನ ರಾಯಭಾರಿಯಾದ ಇಸಾ ಕಸ್ಸಿಸಿಹ್ ರವರು ಈ ಸುದ್ಧಿಯನ್ನು ದೃಢಪಡಿಸಿದರು.

ಫೋನ್‌ನಲ್ಲಿ ವ್ಯಾಟಿಕನ್ ಸುದ್ಧಿಯೊಂದಿಗೆ ಮಾತನಾಡುತ್ತಾ, ಶ್ರೀ. ಕಸ್ಸಿಸಿಹ್ ರವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು: "ಈ ಪ್ರಕರಣದಲ್ಲಿ ಕೆಲಸ ಮಾಡಿದ ಮತ್ತು ಇಬ್ಬರು ಯುವತಿಯರ ವಿಮೋಚನೆಗೆ ಕೊಡುಗೆ ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ."

L'Osservatore Romano ನ ದೈನಂದಿನ ಆವೃತ್ತಿಯು ಈ ಹಿಂದೆ ಏಪ್ರಿಲ್‌ನಲ್ಲಿ ಲಿಯಾನ್ನ ಪ್ರಕರಣವನ್ನು ಮತ್ತು "ಆಡಳಿತಾತ್ಮಕ ಬಂಧನ" ದ ವಿವಾದಾತ್ಮಕ ವಿಷಯವನ್ನು ಒಳಗೊಂಡಿದೆ.

ಈ ಕ್ರಮವು ಭದ್ರತೆಗೆ ಸಂಬಂಧಿಸಿದ ಅನುಮಾನಗಳ ಆಧಾರದ ಮೇಲೆ ಆರೋಪ ಅಥವಾ ವಿಚಾರಣೆಯಿಲ್ಲದೆ ವ್ಯಕ್ತಿಗಳನ್ನು ಬಂಧಿಸಲು ಅನುಮತಿಸುತ್ತದೆ, ಅದನ್ನು ಬಂಧಿತ ಅಥವಾ ಅವರ ಕಾನೂನು ಸಲಹೆಗಾರರಿಗೆ ಬಹಿರಂಗಪಡಿಸಲಾಗುವುದಿಲ್ಲ.

ಬಂಧನವು ಆರು ತಿಂಗಳವರೆಗೆ ಇರುತ್ತದೆ ಮತ್ತು ಹಲವಾರು ಬಾರಿ ಈ ಬಂಧನವು ಹೆಚ್ಚು ಕಾಲಾವಧಿಯವರೆಗೆ ವಿಸ್ತರಿಸಬಹುದು. ಕೆಲವೇ ದಿನಗಳ ಹಿಂದೆ, ಇಸ್ರಯೇಲ್‌ನ ಹೊಸ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ರವರು ಪ್ಯಾಲೇಸ್ತೇನಿನ ಪ್ರಾಂತ್ಯಗಳಲ್ಲಿ ವಸಾಹತುಗಾರರಿಗೆ ಆಡಳಿತಾತ್ಮಕ ಬಂಧನದ ಬಳಕೆಯನ್ನು ಕೊನೆಗೊಳಿಸುವುದಾಗಿ ಘೋಷಿಸಿದಾಗ ವಿವಾದವನ್ನು ಹುಟ್ಟುಹಾಕಿದರು.

ನವೆಂಬರ್‌ನಲ್ಲಿ, ಜೆರುಸಲೆಮ್‌ನಲ್ಲಿರುವ ನಮ್ಮ ವರದಿಗಾರರು ಲಿಯಾನ್‌ನ ತಾಯಿ ಲುಲು ಅರಂಕಿ ನಾಸರ್ ರವರೊಂದಿಗೆ ಸಂದರ್ಶನವನ್ನು ನಡೆಸಿದರು, ಇದು ನವೆಂಬರ್ 12ರಂದು L'Osservatore Romano ನಲ್ಲಿ ಪ್ರಕಟವಾಯಿತು.

ಸಂದರ್ಶನದ ಸಮಯದಲ್ಲಿ, ಈ ಕಷ್ಟದ ಸಮಯದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರ ಬೆಂಬಲ ಮತ್ತು ಪ್ರಾರ್ಥನೆಗಳನ್ನು ಕೋರಿ ಅವರಿಗೆ ಪತ್ರ ಬರೆದಿರುವುದಾಗಿ ಅವರು ಬಹಿರಂಗಪಡಿಸಿದರು.

ಬಂಧನದಲ್ಲಿ ತನ್ನ ಮಗಳನ್ನು ಭೇಟಿ ಮಾಡಲು ಆಕೆಗೆ ಅನುಮತಿಯೇ ನೀಡಲಾಗುವುದಿಲ್ಲ ಎಂಬುದರ ಬಗ್ಗೆ ಅವರು ವರದಿ ಮಾಡಿದ್ದಾರೆ.

ಲಿಯಾನ್ ನಾಸರ್‌ಗೆ ಪರಮಪ್ರಸಾದವನ್ನು ತರಲು ಬಯಸಿದ ಆಕೆಯ ಧರ್ಮಕೇಂದ್ರದ ಧರ್ಮಗುರುವಿಗೂ ಪ್ರವೇಶವನ್ನು ನಿರಾಕರಿಸಲಾಯಿತು ಎಂದು ವರದಿ ಮಾಡಿದ್ದಾರೆ.

ಬಂಧನದಲ್ಲಿರುವ ಸುಮಾರು 10,000 ಪ್ಯಾಲೆಸ್ತೇನಿಯಾದವರು ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಹಾಗೂ ಅವರ ಭವಿಷ್ಯದ ವಿಧಿಲಿಖಿತವು ಏನಾಗಬಹುದು ಎಂದು ಕಾದು ನೋಡುತ್ತಿದ್ದಾರೆ.

 

06 December 2024, 12:07