ಸಿರಿಯಾದ ಜನತೆಯು ಹೊಸ ಯುಗವನ್ನು ಆಶಿಸುತ್ತಿದ್ದಾರೆ

ಮಾಜಿ ಅಧ್ಯಕ್ಷ ಬಶರ್ ಅಸ್ಸಾದ್ ರವರ ಪತನದ ನಂತರ ಮೊದಲ ಮುಸ್ಲಿಂ ಶುಕ್ರವಾರದ ಪ್ರಾರ್ಥನೆಯ ನಂತರ, ಅವರ ಪತನದ ಸಂಭ್ರವನ್ನು ಆಚರಿಸಲು ಸಾವಿರಾರು ಸಿರಿಯಾದ ಡಮಾಸ್ಕಸ್‌ನ ಅತಿದೊಡ್ಡ ಪ್ರಾರ್ಥನಾ ಸಭಾಂಗಣದಲ್ಲಿ ಸೇರುತ್ತಾರೆ, ಇದರಮಧ್ಯೆ ಅಸ್ಸಾದ್ ರಾಜವಂಶವನ್ನು ಉರುಳಿಸಿದ ಮಿಂಚಿನ ಅಭಿಯಾನದ ನಾಯಕ, ದೇಶವನ್ನು ಪುನರ್ನಿರ್ಮಿಸುವ ಭರವಸೆಯನ್ನೀಯುವ ವೀಡಿಯೊ/ದೃಶ್ಯೀಕರಿಸುವ ಸಂದೇಶದಲ್ಲಿ ಕಾಣಿಸಿಕೊಂಡಿದ್ದಾರೆ.

ಲಿಂಡಾ ಬೋರ್ಡೋನಿ ವರದಿ

ಸಿರಿಯಾದಾದ್ಯಂತ 10 ದಿನಗಳ ಮಿಂಚಿನ ಮೆರವಣಿಗೆಯಲ್ಲಿ 52 ವರ್ಷಗಳ ಅಸ್ಸಾದ್ ಆಡಳಿತ ರಾಜವಂಶವನ್ನು ಕೊನೆಗೊಳಿಸಿದ ಹೋರಾಟಗಾರರ ಬಂಡಾಯ ನಾಯಕ ಅಬು ಮೊಹಮ್ಮದ್ ಅಲ್-ಗೋಲಾನಿರವರು ಎಂದು ಹಿಂದೆ ಕರೆಯಲ್ಪಟ್ಟ ಅಹ್ಮದ್ ಅಲ್-ಶರಾರವರು ಭದ್ರತಾ ಪಡೆಗಳನ್ನು ವಿಸರ್ಜಿಸುವ ಭರವಸೆ ನೀಡಿದ್ದಾರೆ. ಹಿಂದಿನ ಆಡಳಿತವು ತನ್ನ ಜೈಲುಗಳನ್ನು ಮುಚ್ಚಿ ಮತ್ತು ಬಂಧಿತರ ಚಿತ್ರಹಿಂಸೆ ಅಥವಾ ಹತ್ಯೆಯಲ್ಲಿ ಭಾಗಿಯಾಗಿರುವ ಯಾರನ್ನಾದರೂ ಬೇಟೆಯಾಡುತ್ತದೆ.

"ಆಶೀರ್ವಾದ ಕ್ರಾಂತಿಯ ವಿಜಯಕ್ಕಾಗಿ ಮಹಾನ್ ಸಿರಿಯಾದ ಜನರನ್ನು" ಅಭಿನಂದಿಸುತ್ತಾ, ಅಲ್-ಶರಾ ರವರು ಗುಂಡುಗಳನ್ನು ಹಾರಿಸದೆ ಮತ್ತು ಜನರನ್ನು ಹೆದರಿಸದೆ ಆಚರಿಸಲು ಅವರನ್ನು ಆಹ್ವಾನಿಸುವ ವೀಡಿಯೊದಲ್ಲಿ ಕಾಣಿಸಿಕೊಂಡರು. ತದನಂತರ, ಈ ದೇಶವನ್ನು ಕಟ್ಟಲು ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದ್ದಾರೆ.

ಅಲ್-ಶರಾರವರ ಗುಂಪು, ಹಯಾತ್ ತಹ್ರೀರ್ ಅಲ್-ಶಾಮ್ ಮತ್ತು ಅದರ ಮಿತ್ರ ಬಂಡುಕೋರರು ಭಾನುವಾರ ಮುಂಜಾನೆ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ ಭದ್ರತೆಯನ್ನು ಸ್ಥಾಪಿಸಲು ಮತ್ತು ರಾಜಕೀಯ ಪರಿವರ್ತನೆಯನ್ನು ಪ್ರಾರಂಭಿಸಲು ಕೆಲಸ ಮಾಡುತ್ತಿದ್ದಾರೆ.

ಪ್ರಾದೇಶಿಕ ರಾಜತಾಂತ್ರಿಕತೆ

ಸಭೆ ನಡೆಯುತ್ತಿದ್ದಂತೆ, ಉನ್ನತ ವಿಶ್ವಸಂಸ್ಥೆ ರಾಜತಾಂತ್ರಿಕರು ಟರ್ಕಿಯಲ್ಲಿ ಪ್ರಾದೇಶಿಕ ಶಕ್ತಿಗಳೊಂದಿಗೆ ಸಿರಿಯಾದಲ್ಲಿನ ಬೆಳವಣಿಗೆಗಳ ಕುರಿತು ವಿಶ್ವಸಂಸ್ಥೆಯ ದೃಷ್ಟಿಕೋನವನ್ನು ಚರ್ಚಿಸುತ್ತಿದ್ದರು.

"ಮಧ್ಯಂತರ ಸರ್ಕಾರವು ಒಳಗೊಳ್ಳುವ, ಪಂಥೀಯವಲ್ಲದ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಭರವಸೆ" ಜೊತೆಗೆ "ಸಿರಿಯಾದ ನೆರೆಹೊರೆಯವರಿಗೆ ಯಾವುದೇ ರೀತಿಯ ಬೆದರಿಕೆಯನ್ನು" ಒಡ್ಡದಿರುವ ಹೊಸ ಆಡಳಿತಕ್ಕಾಗಿ ಆಂಥೋನಿ ಬ್ಲಿಂಕೆನ್ ರವರು ತಮ್ಮ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

15 December 2024, 07:19