ಹುಡುಕಿ

SYRIA-CONFLICT-KURDS SYRIA-CONFLICT-KURDS  (AFP or licensors)

ವಿಶ್ವ ಸಂಸ್ಥೆಯ ಮುಖ್ಯಸ್ಥರು ಸಿರಿಯಾದಲ್ಲಿ ಯುದ್ಧವನ್ನು ನಿಲ್ಲಿಸಲು ಮನವಿ ಮಾಡಿದರು

ಸಿರಿಯಾದ ದತ್ತಿ ಸಂಸ್ಥೆಗಳು ಸಿರಿಯನ್ ಸಂಘರ್ಷದ ಇತ್ತೀಚಿನ ಉಲ್ಬಣದ ನಂತರ ಮಾನವೀಯ ಪರಿಣಾಮಗಳ ಬಗ್ಗೆ ಎಚ್ಚರಿಸುತ್ತಿದ್ದಂತೆ, ಕತಾರ್ ಈ ಪ್ರದೇಶದಲ್ಲಿ ದ್ವೇಷ ಮತ್ತು ಹಗೆತನವನ್ನು ಕೊನೆಗೊಳಿಸಲು ಟರ್ಕಿಯವರೊಂದಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ಲಿಂಡಾ ಬೋರ್ಡೋನಿರವರಿಂದ

ಭಯೋತ್ಪಾದಕ ಗುಂಪು ಮತ್ತು ಇತರ ಸಶಸ್ತ್ರ ಬಣಗಳ ನೇತೃತ್ವದಲ್ಲಿ ವಾಯುವ್ಯ ಸಿರಿಯಾದಲ್ಲಿ ನವೀಕೃತ ಹೋರಾಟವು ನಾಗರಿಕ ಸಾವುನೋವುಗಳಿಗೆ, ಹತ್ತಾರು ಜನರ ಸ್ಥಳಾಂತರಕ್ಕೆ ಮತ್ತು ಅಗತ್ಯ ಮೂಲಸೌಕರ್ಯಗಳಿಗೆ ತೀವ್ರ ಹಾನಿಯನ್ನುಂಟುಮಾಡಿದೆ ಎಂಬುದು ಕಂಡುಬಂದಿದೆ.

ದ್ವೇಷ ಮತ್ತು ಹಗೆತನದ ಯುದ್ಧವನ್ನು ತಕ್ಷಣವೇ ನಿಲ್ಲಿಸಲು ಕರೆಗಳನ್ನು ಸೇರಿಸುತ್ತಾ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯು ನಾಗರಿಕರನ್ನು ರಕ್ಷಿಸಲು ಮತ್ತು ಹಿಂಸಾಚಾರದಿಂದ ಪಲಾಯನ ಮಾಡುವವರಿಗೆ ಸುರಕ್ಷಿತ ಮಾರ್ಗವನ್ನು ಅನುಮತಿಸಲು ಮಾನವೀಯ ಕಾನೂನು ಸೇರಿದಂತೆ ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಎಲ್ಲಾ ಪಕ್ಷಗಳಿಗೆ ನೆನಪಿಸಿದರು.

ಮಾನವ ಹಕ್ಕುಗಳ ಸಿರಿಯನ್ ವೀಕ್ಷಣಾಲಯದ ಪ್ರಕಾರ, ದೇಶದ ಉತ್ತರದ ಹೋರಾಟದ ದಿನಗಳಲ್ಲಿ 92 ನಾಗರಿಕರು ಸೇರಿದಂತೆ 514ಕ್ಕೆ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ಅವರ ಮನವಿಯಲ್ಲಿ ಕಾಣಬಹುದಾಗಿದೆ.

ಸಿರಿಯನ್ ಸಂಘರ್ಷವು 14ನೇ ವರ್ಷಕ್ಕೆ ಕಾಲಿಡುತ್ತಿರುವಂತೆ ಮಾತನಾಡುತ್ತಾ, ಆಂಟೋನಿಯೊ ಗುಟೆರೆಸ್ ರವರು ಸಮಗ್ರ ರಾಜಕೀಯ ಪರಿಹಾರವನ್ನು ತಲುಪುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು ಮತ್ತು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯೊಂದಿಗೆ ತೊಡಗಿಸಿಕೊಳ್ಳಲು ಮತ್ತು ಭದ್ರತಾ ಮಂಡಳಿಯ ನಿರ್ಣಯ 2254ರ ಪ್ರಕಾರ ವಿಶ್ವಸಂಸ್ಥೆಯ-ಅನುಕೂಲಕರ ರಾಜಕೀಯ ಪ್ರಕ್ರಿಯೆಗೆ ಮರಳಲು ಪ್ರೋತ್ಸಾಹಿಸಿದರು.

"ಸಿರಿಯಾದ ಜನರು ಶಾಂತಿಯುತ ಭವಿಷ್ಯವನ್ನು ಜೀವಿಸುವ ರಾಜಕೀಯ ದಿಗಂತಕ್ಕೆ ಅರ್ಹರಾಗಿದ್ದಾರೆ - ಹೆಚ್ಚು ರಕ್ತಪಾತವನ್ನುಂಟು ಮಾಡುವ ಭವಿಷ್ಯಕ್ಕಲ್ಲಾ " ಎಂದು ಅವರು ಹೇಳಿದರು.

ಯುದ್ಧ, ಭೂಕಂಪಗಳು, ಪ್ರಾದೇಶಿಕ ಅಸ್ಥಿರತೆ
ಯುದ್ಧವು ಲಕ್ಷಾಂತರ ಜನರ ಜೀವವನ್ನು ಮತ್ತು ಜೀವನೋಪಾಯವನ್ನು ಛಿದ್ರಗೊಳಿಸಿದೆ. ಅದರಲ್ಲಿಯೂ, ಕಳೆದ ಫೆಬ್ರವರಿಯಲ್ಲಿ ಸಂಭವಿಸಿದ ಎರಡು ಪ್ರಮುಖ ಭೂಕಂಪಗಳು, ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಗಳೊಂದಿಗೆ ಸೇರಿಕೊಂಡು, ಬಿಕ್ಕಟ್ಟನ್ನು ಮತ್ತಷ್ಟು ಆಳಗೊಳಿಸಿವೆ ಮತ್ತು ದುರ್ಬಲತೆಗಳನ್ನು ಹೆಚ್ಚಿಸಿವೆ. ಮತ್ತು ಸೆಪ್ಟೆಂಬರ್‌ನಲ್ಲಿ ಹಿಜ್ಬುಲ್ಲಾ ವಿರುದ್ಧ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯು ತೀವ್ರಗೊಂಡಾಗಿನಿಂದ, 500,000 ನಿರಾಶ್ರಿತರು ಲೆಬನಾನ್‌ನಿಂದ ಸಿರಿಯಾಕ್ಕೆ ಪಲಾಯನ ಮಾಡಿದ್ದಾರೆ.

2024ರಲ್ಲಿ, ಅಂದಾಜಿನ ಪ್ರಕಾರ ಸುಮಾರು 16.7ಮಿಲಿಯನ್ ಜನರಿಗೆ ಮಾನವೀಯ ನೆರವು ಅಗತ್ಯವಿರುತ್ತದೆ ಎಂದು ಮಾನವೀಯ ಏಜೆನ್ಸಿಗಳು ಎಚ್ಚರಿಸುತ್ತವೆ - 2011ರಲ್ಲಿ ಸಿರಿಯನ್ ಬಿಕ್ಕಟ್ಟು ಪ್ರಾರಂಭವಾದ ನಂತರದ ಅಂಕಿ ಅಂಶಗಳು ಹೆಚ್ಚುತ್ತಿವೆ ಎಂದು ವರದಿ ನೀಡಲಾಗಿದೆ.

ವಿದೇಶಿ ಶಕ್ತಿಗಳು
2020ರ ಕದನ ವಿರಾಮವು ದೇಶದ ಉತ್ತರಕ್ಕೆ ತುಲನಾತ್ಮಕವಾಗಿ ಶಾಂತತೆಯನ್ನು ತಂದ ನಂತರದ, ಭಾರೀ ಘರ್ಷಣೆಗಳನ್ನು ಪ್ರಚೋದಿಸುವ ಮೂಲಕ ಸಂಘರ್ಷದಲ್ಲಿ ಹಲವಾರು ಪ್ರಮುಖ ಆಟಗಾರರು ವಿಚಲಿತರಾಗಿರುವುದರಿಂದ ಅಥವಾ ದುರ್ಬಲಗೊಂಡಿರುವುದರಿಂದ ಬಂಡುಕೋರ ಪಡೆಗಳಿಂದ ಅಲೆಪ್ಪೊದಲ್ಲಿ ಅದ್ಭುತ ಮುನ್ನಡೆಯು ಕಂಡುಬಂದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

2011ರಲ್ಲಿ ಅಧ್ಯಕ್ಷ ಬಶರ್ ಅಸ್ಸಾದ್ ಆಡಳಿತದ ವಿರುದ್ಧದ ದಂಗೆಯ ನಂತರ ಸಿರಿಯಾದ ಅಂತರ್ಯುದ್ಧ ಪ್ರಾರಂಭವಾಯಿತು. ವಿಶ್ವಸಂಸ್ಥೆ, ರಷ್ಯಾ ಮತ್ತು ಇರಾನ್ ಸೇರಿದಂತೆ ಐದು ವಿದೇಶಿ ಶಕ್ತಿಗಳು ದೇಶದಲ್ಲಿ ಮಿಲಿಟರಿ ಉಪಸ್ಥಿತಿಯನ್ನು ಹೊಂದಿವೆ.

03 December 2024, 13:42