ಪೋಪ್ ಫ್ರಾನ್ಸಿಸ್: ಆತ್ಮರು ನಮ್ಮನ್ನು ಭರವಸೆಯಲ್ಲಿ ಬೆಸೆಯಲಿ
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ವಾರದ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಧರ್ಮಸಭೆಯ ಜೀವನದಲ್ಲಿ ಪವಿತ್ರಾತ್ಮರ ಪಾತ್ರ ಎಂಬ ಕುರಿತ ಧರ್ಮೋಪದೇಶದ ಚಿಂತನೆಗಳ ಸರಣಿಯನ್ನು ಮುಕ್ತಾಯಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪವಿತ್ರಾತ್ಮರು ಎಲ್ಲಾ ವರದಾನಗಳ ಮೂಲವಾಗಿದ್ದು, ನಮ್ಮನ್ನು ಭರವಸೆಯಲ್ಲಿ ಬೆಸೆಯುವವರಾಗಿದ್ದಾರೆ ಎಂದು ಹೇಳಿದರು.
ಇಂದು ಪೋಪ್ ಫ್ರಾನ್ಸಿಸ್ ಅವರು ಪ್ರಕಟನಾ ಗ್ರಂಥದ ವ್ಯಾಕ್ಯಗಳ ಮೇಲೆ ತಮ್ಮ ಚಿಂತನೆಯನ್ನು ನಡೆಸಿದರು. ಇದೇ ವೇಳೆ ಅವರು "ಬನ್ನಿ" ಎಂಬ ಪದದ ಮೇಲೆ ಜಿಜ್ಞಾಸೆಯನ್ನು ನಡೆಸಿ, ಅದರ ವಿವಿಧ ಮಜಲುಗಳನ್ನು ಹಾಗೂ ಗೂಢಾರ್ಥಗಳನ್ನು ವಿವರಿಸಿದರು. ಧರ್ಮಸಭೆ ಸದಾ ಯೇಸುವಿನ ಎರಡನೇ ಆಗಮನವನ್ನು ನಿರೀಕ್ಷಿಸುತ್ತದೆ ಹಾಗೂ ನಿರೀಕ್ಷಿಸುತ್ತಲೇ ಇರುತ್ತದೆ ಎಂದು ಹೇಳಿದರು.
"ಬನ್ನಿ" ಎಂಬುದು ಕ್ರಿಸ್ತರಿಗೆ ಹಾಗೂ ಪವಿತ್ರಾತ್ಮರ ಕುರಿತು ಹೇಳಿರುವುದಾಗಿದ್ದು, ಅವರನ್ನು ನಾವು ಸಂಪೂರ್ಣ ವಿಶ್ವಾಸದಿಂದ ಕರೆಯುವುದಾಗಿದೆ. "ಬನ್ನಿ ಸೃಷ್ಟಿಕರ್ತ ಆತ್ಮರೇ" ಎಂದು ನಾವು ಪವಿತ್ರಾತ್ಮರನ್ನೂ ಸಹ ಕರೆಯುತ್ತೇವೆ" ಎಂದು ಪವಿತ್ರ ತಂದೆ ಪೋಪ್ ಫ್ರಾನ್ಸಿಸ್ ನುಡಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಪವಿತ್ರಾತ್ನರು ಕ್ರೈಸ್ತ ಭರವಸೆಯ ಮೂಲವಾಗಿದ್ದಾರೆ" ಎಂದು ಹೇಳಿದರು. ಇತಿಹಾಸದ ಸಾಗರದಲ್ಲಿ ಪವಿತ್ರಾತ್ಮರು ಹಾಯಿಯಂತೆ ನಮ್ಮನ್ನು ಮುನ್ನಡೆಸುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಸಾರ್ವಜನಿಕ ಭೇಟಿಯಲ್ಲಿ ಹೇಳುವ ಮೂಲಕ ಪವಿತ್ರಾತ್ಮರ ಕುರಿತ ಧರ್ಮೋಪದೇಶ ಚಿಂತನೆಯ ಸರಣಿಯನ್ನು ಮುಕ್ತಾಯಗೊಳಿಸಿದರು.