ಹುಡುಕಿ

ದಕ್ಷಿಣ ಕೊರಿಯಾದೊಂದಿಗೆ ಎಲ್ಲಾ ರೀತಿಯ ಸಂವಹನ ಕಡಿತಗೊಳಿಸಿದ ಉತ್ತರ ಕೊರಿಯಾ: ಸಿಯೋಲ್ ಆರ್ಚ್'ಬಿಷಪ್ ಕಳವಳ

ಉತ್ತರ ಕೊರಿಯಾ ದೇಶವು ದಕ್ಷಿಣಾ ಕೊರಿಯಾ ದೇಶದೊಂದಿದೆ ಎಲ್ಲಾ ರೀತಿಯ ಸಂವಹನವನ್ನು ಸೋಮವಾರ ಕಡಿತಗೊಂಡಿದೆ. ಈ ಕುರಿತು ಕಳವಳ ವ್ಯಕ್ತಪಡಿಸಿರುವ ದಕ್ಷಿಣ ಕೊರಿಯಾ ದೇಶದ ಸಿಯೋಲ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಪೀಟರ್ ಸೈನ್-ಟೂಕ್ ಚೂಂಗ್ ಅವರು ಉತ್ತರ ಹಾಗೂ ದಕ್ಷಿಣ ಕೊರಿಯಾ ದೇಶಗಳು ಮತ್ತೆ ಏಕೀಕರಣವಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ವರದಿ: ಲಿಕಾಸ್ ನ್ಯೂಸ್

ಇತ್ತೀಚೆಗಷ್ಟೇ ಉತ್ತರ ಕೊರಿಯಾ ಮಿಲಿಟರಿಯು ಉತ್ತರ ಕೊರಿಯಾ ದೇಶವನ್ನು ಶಾಶ್ವತವಾಗಿ ಪ್ರತ್ಯೇಕ ದೇಶವನ್ನು ಮಾಡುವ ಉದ್ದೇಶದಿಂದ ದಕ್ಷಿಣ ಕೊರಿಯ ದೇಶದಿಂದ ಬೇರ್ಪಡುವ ಸಲುವಾಗಿ ದಕ್ಷಿಣಾ ಕೊರಿಯಾಕ್ಕೆ ರಸ್ತೆ, ರೈಲು ಸೇರಿದಂತೆ ಎಲ್ಲಾ ರೀತಿಯ ಸಂಪರ್ಕವನ್ನು ಕಡಿತಗೊಳಿಸಿದೆ ಎಂದು ವರದಿಯಾಗಿದೆ.

ಈ ಕುರಿತು ಮಾತನಾಡಿರುವ ಸಿಯೋಲ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಪೀಟರ್ ಸೈನ್-ಟೂಕ್ ಚೂಂಗ್ ಅವರು ಈ ದೇಶದ ಯುವ ಜನರು ಈ ಎರಡೂ ದೇಶಗಳು ಮತ್ತೆ ಒಂದಾಗುವ ಕನಸನ್ನು ಕಂಡಿದ್ದರು. ಇದೀಗ ಆ ಕನಸೂ ಸಹ ಕಮರಿದೆ. ಇದರಿಂದಾಗಿ, ಸೋದರತ್ವದ ಭಾವವೂ ಸಹ ಕುಸಿದಂತಾಗಿದೆ ಎಂದು ಹೇಳಿದ್ದಾರೆ.

ಉತ್ತರ ಕೊರಿಯಾದ ಈ ನಿರ್ಧಾರವು ಆ ದೇಶದ ಜನರ ಮೇಲಿನ ಹೆಚ್ಚಿನ ಪರಿಣಾಮವನ್ನು ಬೀರಲಿದೆ ಎಂದು ಅಂತರಷ್ಟ್ರೀಯ ಸಂಪರ್ಕಗಳ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

14 October 2024, 17:26