ಹುಡುಕಿ

ತಾಯ್ತನವನ್ನು ಸಂಭ್ರಮಿಸಿದ ಪೋಪ್: ಜೀವದ ಅದ್ಭುತಕ್ಕಾಗಿ ದೇವರನ್ನು ಸ್ತುತಿಸಿರಿ

ಕ್ರಿಸ್ಮಸ್ ಹಬ್ಬವು ಸಮೀಪಿಸುತ್ತಿರುವ ಹಿನ್ನೆಲೆ, ಆಗಮನ ಕಾಲದ ನಾಲ್ಕನೇ ಭಾನುವಾರದಂದು ಪೋಪ್ ಫ್ರಾನ್ಸಿಸ್ ಅವರು ತ್ರಿಕಾಲ ಪ್ರಾರ್ಥನೆಯಲ್ಲಿ ತಾಯ್ತನದ ವರದಾನದ ಕುರಿತು ಮಾತನಾಡಿದ್ದಾರೆ. ಜೀವದ ಅದ್ಭುತಕ್ಕಾಗಿ ದೇವರನ್ನು ಸ್ತುತಿಸಬೇಕು ಎಂದು ಹೇಳಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಕ್ರಿಸ್ಮಸ್ ಹಬ್ಬವು ಸಮೀಪಿಸುತ್ತಿರುವ ಹಿನ್ನೆಲೆ, ಆಗಮನ ಕಾಲದ ನಾಲ್ಕನೇ ಭಾನುವಾರದಂದು ಪೋಪ್ ಫ್ರಾನ್ಸಿಸ್ ಅವರು ತ್ರಿಕಾಲ ಪ್ರಾರ್ಥನೆಯಲ್ಲಿ ತಾಯ್ತನದ ವರದಾನದ ಕುರಿತು ಮಾತನಾಡಿದ್ದಾರೆ. ಜೀವದ ಅದ್ಭುತಕ್ಕಾಗಿ ದೇವರನ್ನು ಸ್ತುತಿಸಬೇಕು ಎಂದು ಹೇಳಿದ್ದಾರೆ. 

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು "ದೇವರ ಕೊಡುಗೆಯಾದ ಪ್ರತಿ ಜೀವವನ್ನು ನಾವು ಪ್ರಶಂಸಿಸಬೇಕು. ಇದು ದೇವರ ವರದಾನವಾಗಿದ್ದು, ಅದಕ್ಕಾಗಿ ದೇವರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸಬೇಕು" ಎಂದು ಹೇಳಿದರು. "ಪ್ರತಿಯೊಬ್ಬ ತಾಯಿಯ ಉದರದಲ್ಲಿನ ಮಗುವೂ ದೇವರ ವರದಾನವಾಗಿದ್ದು, ಜೀವ ಎಂಬುದು ಅತ್ಯಮೂಲ್ಯವಾಗಿದೆ ಎಂದು ಹೇಳಿದರು.

ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್

ಮಾತೆ ಮರಿಯಮ್ಮನವರು ಎಲಿಜಬೇತಳನ್ನು ಸಂಧಿಸಿದ ಹಾಗೂ ಹೇಗೆ ಆಕೆ ಸಂಧಿಸಿದಾಗ ಎಲಿಜಬೇತಳ ಉದರದಲ್ಲಿದ್ದ ಸ್ನಾನಿಕ ಯೊವ್ವಾನರು ಸಂತೋಷದಿಂದ ನಲಿದಾಡಿದರು ಎಂಬ ಕುರಿತು ಪೋಪ್ ಫ್ರಾನ್ಸಿಸ್ ಅವರು ತಮ್ಮ ಇಂದಿನ ಚಿಂತನೆಯನ್ನು ಪ್ರಸ್ತುತ ಪಡಿಸಿದರು. "ಇಲ್ಲಿ ಗರ್ಭವತಿಯಾಗಿರುವ ಅನೇಕ ತಾಯಂದಿರು ಇದ್ದೀರಿ. ನಿಮಗೆಲ್ಲರಿಗೂ ದೇವರ ಆಶೀರ್ವಾದಗಳು. ನಾವು ಎಂದಿಗೂ ಸಹ ಇವರಿಗಾಗಿ ಕಾಳಜಿಯನ್ನು ಮಾಡಬೇಕು" ಎಂದು ಭಕ್ತಾಧಿಗಳಿಗೆ ಪೋಪ್ ಫ್ರಾನ್ಸಿಸ್ ಅವರು ಕರೆ ನೀಡಿದರು. ಕ್ರಿಸ್ಮಸ್ ಹಿನ್ನೆಲೆಯಲ್ಲಿ ನಾವು ಮಕ್ಕಳನ್ನು ಎತ್ತುಕೊಂಡಿರುವ ಯಾವುದೇ ತಾಯಂದಿರನ್ನು ನೋಡುವಾಗ ಅವರಿಗೆ ಅಭಿನಂದನೆಗಳನ್ನು ಹಾಗೂ ಪ್ರಶಂಸೆಯನ್ನು ನೀಡೋಣ ಎಂದು ಅವರು ಹೇಳಿದರು.

ಯುದ್ದದಲ್ಲಿ ಮಡಿದ ಮಕ್ಕಳಿಗಾಗಿ ಪ್ರಾರ್ಥನೆ: ಪೋಪ್ ಫ್ರಾನ್ಸಿಸ್ ಕರೆ

ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಯುದ್ಧದಲ್ಲಿ ಬಂದೂಕಿನಿಂದ ಸಾವನ್ನಪ್ಪಿರುವ ಮಕ್ಕಳನ್ನು ನೆನೆದ ಅವರು, ಅವರಿಗಾಗಿ ಪ್ರಾರ್ಥಿಸುವಂತೆ ಭಕ್ತಾಧಿಗಳಿಗೆ ಕರೆ ನೀಡಿದರು. ಜಗತ್ತಿನಲ್ಲಿ ಮತ್ತೆ ಶಾಂತಿಯನ್ನು ಮರುಸ್ಥಾಪಿಸಬೇಕು ಎಂದು ಹೇಳುವ ಮೂಲಕ ತಮ್ಮ ಮಾತುಗಳನ್ನು ಪುನರುಚ್ಛಿರಿಸಿದ್ದಾರೆ.   

ಪೋಪ್ ಫ‌್ರಾನ್ಸಿಸ್ ಅವರು ಈ ವೇಳೆ ಯುದ್ಧದಲ್ಲಿ ಮಡಿದಿರುವ ಹಾಗೂ ಅದರಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಎಲ್ಲಾ ಜನತೆಯನ್ನು ನೆನಪಿಸಿಕೊಂಡು ಪ್ರಾರ್ಥಿಸಿದರು. ಈ ವೇಳೆ ಮಕ್ಕಳ ಕುರಿತು ವಿಶೇಷ ಕಾಳಜಿಯನ್ನು ವಹಿಸಿದ ಅವರು "ಮಕ್ಕಳು ದೇವರ ಕೊಡುಗೆ" ಎಂದು ಹೇಳಿದರು. ಯುದ್ಧ ಎಂಬುದು ಎಂದಿಗೂ ಸೋಲಾಗಿದ್ದು, ಇದರಿಂದ ನರಳುವುದು, ಯಾತನೆಯನ್ನು ಅನುಭವಿಸುವುದು ಮಾತ್ರ ನಿರಪರಾಧಿಗಳು ಹಾಗೂ ಜನ ಸಾಮಾನ್ಯರು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. ಯುದ್ಧಗಳು ನಿಲ್ಲಬೇಕೆಂಬ ಕುರಿತು ಹೇಳಿದ ಅವರು ಮತ್ತೆ ಕದನ ವಿರಾಮವನ್ನು ಎಲ್ಲಾ ಯುದ್ಧ ನಿರತ ದೇಶಗಳು ಘೋಷಿಸಬೇಕು ಎಂದು ಹೇಳಿದರು.

"ಇಂದು ಬೆಳಿಗ್ಗೆ ನಾನು ಕೆಲವು ಮಕ್ಕಳ ಜೊತೆ ಸಮಯ ಕಳೆದೆ. ಅದ್ಭುತವಾದ ಸಮಯವದು. ಆ ಸಮಯ ಕಳೆದಿದ್ದು ಹೇಗೆ ಅಂತಲೇ ಗೊತ್ತಾಗಲಿಲ್ಲ" ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು ಮಕ್ಕಳನ್ನು ಆಶೀರ್ವದಿಸಿದರು. ಇದಕ್ಕೂ ಮುಂಚಿತವಾಗಿ ಮಾತನಾಡಿದ ಅವರು ಉಕ್ರೇನ್ ದೇಶ ಸೇರಿದಂತೆ ಯುದ್ಧ ನಿರತ ದೇಶಗಳಲ್ಲಿನ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಬಂದೂಕಿನ ಶಬ್ದಗಳು ಶಾಶ್ವತವಾಗಿ ಮೌನವಾಗಲಿ. ಕ್ರಿಸ್ಮಸ್ ಸುಮಧುರ ಗೀತೆಗಳ ಝೇಂಕಾರ ಎಲ್ಲೆಡೆ ಮೊಳಗಲಿ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.         

22 December 2024, 15:45

The Angelus is a special prayer recited by Catholics three times a day, at 6am, noon, and 6pm and is accompanied by the ringing of the Angelus bell. The name comes from the Latin word for Angel and the prayer itself reminds us of how Jesus Christ assumed our human nature through the Mystery of the Incarnation.
The Pope recites the Angelus prayer in St Peter’s Square every Sunday at midday.
He also gives a brief reflection on the Gospel of the day and often comments on some issue of international concern. The Pope’s words are broadcast all over the world on radio and television and widely shared on social media.
From Easter to Pentecost the Regina Coeli is prayed instead of the Angelus. This prayer commemorates the Resurrection of Jesus Christ and, like the Angelus, concludes with the recitation of the Gloria three times.

Latest Angelus / Regina Coeli

ಎಲ್ಲಾ ಓದಿ >