ಪೋಪ್ ಫ್ರಾನ್ಸಿಸ್: ಅಸ್ತ್ರಗಳಿಂದ ಜನರನ್ನು ವಸಹಾತೀಕರಿಸುವುದು ನಿಲ್ಲಬೇಕು
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
ಸಂತ ಸ್ತೇಫನರ ಹಬ್ಬದಂದು ಪೋಪ್ ಫ್ರಾನ್ಸಿಸ್ ಅವರು ತ್ರಿಕಾಲ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಜ್ಯೂಬಿಲಿ ವರ್ಷದಲ್ಲಿ ನಾವು ಸಾಲಗಳನ್ನು ಮನ್ನಿಸಬೇಕು. ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು. ಯುದ್ಧಗಳು ಇನ್ನೂ ಹರಡುವುದನ್ನು ತಪ್ಪಿಸಲು ಹಾಗೂ ಅಸ್ತ್ರಗಳಿಂದ ಜನರನ್ನು ವಸಹಾತೀಕರಿಸುವುದನ್ನು ತಪ್ಪಿಸಲು ನಾವು ಶಾಂತಿಗಾಗಿ ಒತ್ತಾಯಿಸಬೇಕು ಎಂದು ಅವರು ಹೇಳಿದ್ದಾರೆ.
"ನಾನು ನಿಮ್ಮೆಲ್ಲರಿಗೆ ಮತ್ತೊಮ್ಮೆ ಪವಿತ್ರ ಕಾಲ ಕ್ರಿಸ್ಮಸ್ ಶುಭಾಶಯಗಳನ್ನು ಕೋರುತ್ತೇನೆ. ನನ್ನೊಡನೆ ನಿಕಟತೆ ಹಾಗೂ ಐಕ್ಯತೆಯನ್ನು ವ್ಯಕ್ತಪಡಿಸುವ ಸಾವಿರಾರು ಸಂದೇಶಗಳನ್ನು ನಾನು ಸ್ವೀಕರಿಸಿದ್ದೇನೆ. ನಿಮ್ಮ ಪ್ರಾರ್ಥನೆಗಳಿಗೆ ಹಾಗೂ ನಲ್ವಾರೈಕೆಗಳಿಗೆ ನನ್ನ ಧನ್ಯವಾದಗಳು" ಎಂದು ಪೋಪ್ ಫ್ರಾನ್ಸಿಸ್ ಅವರು ಭಕ್ತಾಧಿಗಳಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
"ಜ್ಯೂಬಿಲಿ ವರ್ಷದಲ್ಲಿ ನಾವು ಸಾಲಗಳನ್ನು ಕ್ಷಮಿಸಬೇಕು. ನಮ್ಮ ವೈರಿಗಳನ್ನು ಕ್ಷಮಿಸಬೇಕು. ಅಂತೆಯೇ ಯುದ್ಧದ ಸಕಲ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಎಂದು ಹೇಳಿರುವ ಅವರು ಜಗತ್ತಿನಲ್ಲಿ ಮತ್ತೆ ಶಾಂತಿ ಮರುಸ್ಥಾಪನೆಯಾಗುವಂತೆ ಪ್ರಾರ್ಥಿಸುವಂತೆ ಭಕ್ತಾಧಿಗಳಿಗೆ ಕರೆ ನೀಡಿದ್ದಾರೆ. ಯುದ್ಧಗ್ರಸ್ಥ ದೇಶಗಳಲ್ಲಿ ನರಳುತ್ತಿರುವ ನಮ್ಮ ಸಹೋದರ ಸಹೋದರಿಯರು, ವಿಶೇಷವಾಗಿ ಮಕ್ಕಳಿಗಾಗಿ ನಮ್ಮ ಹೃದಯಗಳು ಪ್ರಾರ್ಥನೆಯಲ್ಲಿ ದೇವರಿಗೆ ಮೊರೆಯಿಡಬೇಕು ಎಂದು ನುಡಿದಿದ್ದಾರೆ.
ಸಂತ ಸ್ಥೇಫನರ ದಿನಾಚರಣೆ: ಸ್ಥೇಫನರ ಆದರ್ಶ
ಸಂತ ಸ್ತೇಫನರ ಹಬ್ಬದಂದು ಪೋಪ್ ಫ್ರಾನ್ಸಿಸ್ ಅವರು ತ್ರಿಕಾಲ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವಿಶ್ವಾಸದ ಸಲುವಾಗಿ ಹಿಂಸೆಯನ್ನು ಅನುಭವಿಸುತ್ತಿರುವವರಿಗಾಗಿ ಅವರು ಭಕ್ತಿಯಿಂದ ಪ್ರಾರ್ಥಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕೆಂದು ಹೇಳಿದ್ದಾರೆ.
"ಸಂತ ಸ್ತೇಫನರನ್ನು ಅವರ ಕ್ರೈಸ್ತ ವಿಶ್ವಾಸಕ್ಕಾಗಿ ಅನ್ಯ ಜನರು ಕಲ್ಲೆಸೆದು ಕೊಲ್ಲುತ್ತಿರುವಾಗ ಅವರು ಹಿಂಸೆಯನ್ನು ಅನುಭವಿಸುತ್ತಿದ್ದಾರೆ ಎಂದು ನಾವು ಅಂದುಕೊಂಡರೂ ಸಹ, ಅದೇ ಸಮಯದಲ್ಲಿ ಅವರು ತಮ್ಮನ್ನು ಕೊಲ್ಲುತ್ತಿರುವವರಿಗಾಗಿ ದೇವರಲ್ಲಿ ಪ್ರಾರ್ಥಿಸಿದರು" ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು, ಇಂತಹ ವಿಶ್ವಾಸ ನಮ್ಮದಾಗಬೇಕು. ಹಾಗಾಗಬೇಕೆಂದರೆ ನಾವು ನಮ್ಮ ಹೃದಯಗಳನ್ನು ದೇವರಿಗೆ ತೆರೆಯಬೇಕು ಎಂದು ಹೇಳಿದ್ದಾರೆ.
"ತಂದೆಯಾದ ದೇವರು ತನ್ನ ಮಕ್ಕಳಿಗೆ ಸದಾ ಒಳಿತನ್ನೇ ಬಯಸುತ್ತಾರೆ ಎಂಬುದರ ಸಂಕೇತವಾಗಿದ್ದಾರೆ ಸಂತ ಸ್ತೇಫನರು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಪ್ರಪಂಚದ ಮೂಲೆ ಮೂಲೆಗಳಲ್ಲಿ ಈಗಲೂ ಸಹ ಶುಭ ಸಂದೇಶದ ಕಾರಣಕ್ಕಾಗಿ ಜನರು ಹಿಂಸೆಯನ್ನು ಅನುಭವಿಸುತ್ತಿದ್ದಾರೆ ಎಂದು ಅವರು ನುಡಿದರು.
"ದೇವರನ್ನು ಅರಿತುಕೊಳ್ಳಲು ನಾನು ಉತ್ಸುಕನಾಗಿದ್ದೇನೆಯೇ?" "ನನ್ನನ್ನು ಯಾತನೆಗೆ ದೂಡುವವರಿಗೂ ಸಹ ನಾನು ಒಳಿತನ್ನು ಬಯಸುತ್ತೇನೆಯೇ?" ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಿದೆ ಎಂದು ಹೇಳುವ ಮೂಲಕ ಪೋಪ್ ಫ್ರಾನ್ಸಿಸ್ ತಮ್ಮ ಮಾತುಗಳನ್ನು ಮುಗಿಸಿದರು.